ADVERTISEMENT

ಮುಂಬೈನ ಟೆಸ್ಲಾ ಮಳಿಗೆ: ಸಾರಿಗೆ ಸಚಿವರಿಂದಲೇ ಮೊದಲ ಕಾರು ಖರೀದಿ

ಪಿಟಿಐ
Published 5 ಸೆಪ್ಟೆಂಬರ್ 2025, 10:26 IST
Last Updated 5 ಸೆಪ್ಟೆಂಬರ್ 2025, 10:26 IST
<div class="paragraphs"><p>ಟೆಸ್ಲಾದ ಮಾಡೆಲ್‌ ವೈ&nbsp;ಕಾರು ಖರೀದಿಸಿದ ಮಹಾರಾಷ್ಟ್ರ ಸಾರಿಗೆ ಸಚಿವ</p></div>

ಟೆಸ್ಲಾದ ಮಾಡೆಲ್‌ ವೈ ಕಾರು ಖರೀದಿಸಿದ ಮಹಾರಾಷ್ಟ್ರ ಸಾರಿಗೆ ಸಚಿವ

   

ಚಿತ್ರಕೃಪೆ: PratapSarnaik

ಮುಂಬೈ: ಭಾರತದಲ್ಲಿ ತೆರೆಯಲಾದ ಟೆಸ್ಲಾ ಕಾರುಗಳ ಮೊದಲ ಮಳಿಗೆಯಲ್ಲಿ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಕ್‌ ಮಾಡೆಲ್‌ ವೈ ಕಾರನ್ನು ಖರೀದಿಸಿದ್ದಾರೆ.

ADVERTISEMENT

ಈ ಮೂಲಕ ಭಾರತದಲ್ಲಿ, ಟೆಸ್ಲಾದ ಮಾಡೆಲ್‌ ವೈ ಕಾರು ಖರೀದಿಸಿದ ಮೊದಲಿಗ ಎನಿಸಿದ್ದಾರೆ.

ಜುಲೈನಲ್ಲಿ ಮುಂಬೈನ ಬಾಂದ್ರಾದಲ್ಲಿ ಮೊದಲ ಟೆಸ್ಲಾ ಕಾರುಗಳ ಮಳಿಗೆ ತೆರೆಯಲಾಗಿತ್ತು. ಇಲ್ಲಿ ಆರಂಭಿಕವಾಗಿ ಮಾಡೆಲ್‌ ವೈ ಕಾರುಗಳನ್ನು ಮಾರಾಟಕ್ಕೆ ಇರಿಸಲಾಗಿದೆ.

‘ಎಲೆಕ್ಟ್ರಿಕ್‌ ವಾಹನಗಳನ್ನು ಕೊಳ್ಳಬೇಕೆಂದು ಜಾಗೃತಿ ಮೂಡಿಸುವ ಪ್ರಯತ್ನ’ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.

‘ಮೊಮ್ಮಗನಿಗೆ ಉಡುಗೊರೆಯಾಗಿ ನೀಡಲು ಕಾರನ್ನು ಖರೀದಿಸಿದ್ದೇನೆ, ಯುವಜನರಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಅರಿವು ಮೂಡಿಸಬೇಕು. ಈಗಿನಿಂದಲೇ ಸುಸ್ಥಿರ ಸಾರಿಗೆಯ ಮಹತ್ವವನ್ನು ತಿಳಿಸಬೇಕು’ ಎಂದಿದ್ದಾರೆ.

₹59.89 ಲಕ್ಷ ಆರಂಭಿಕ ಬೆಲೆಯ ‘ಮಾಡೆಲ್‌ ವೈ’ ಕಾರನ್ನು ಕಂಪನಿಯು ಜುಲೈ 15ರಂದು ಮುಂಬೈನಲ್ಲಿ ಅನಾವರಣಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.