ADVERTISEMENT

ಕೋವಿಡ್‌ ಹೆಚ್ಚಳ | ಸಂಸತ್ತಿನ ವಿಶೇಷ ಅಧಿವೇಶನ: ರಾಷ್ಟ್ರಪತಿಗೆ ಕಾಂಗ್ರೆಸ್ ಒತ್ತಾಯ

ಪಿಟಿಐ
Published 19 ಏಪ್ರಿಲ್ 2021, 12:01 IST
Last Updated 19 ಏಪ್ರಿಲ್ 2021, 12:01 IST
ಮನೀಶ್ ತಿವಾರಿ
ಮನೀಶ್ ತಿವಾರಿ   

ನವದೆಹಲಿ: ‘ಕೋವಿಡ್‌ ಪರಿಸ್ಥಿತಿ ಎದುರಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸುವುದು ಅಗತ್ಯವಾಗಿದ್ದು, ಈ ಬಗ್ಗೆ ಚರ್ಚಿಸಲು ಸಂಸತ್ತಿನ ಎರಡು ದಿನಗಳ ವಿಶೇಷ ಅಧಿವೇಶನ ಕರೆಯಬೇಕು’ ಎಂದು ಕಾಂಗ್ರೆಸ್‌ ಮುಖಂಡ ಮನೀಶ್‌ ತಿವಾರಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಒತ್ತಾಯಿಸಿದ್ದಾರೆ.

ದೇಶವನ್ನು ದುರಂತ ಆವರಿಸುತ್ತಿದೆ. ಇಂತಹ ಸಂದರ್ಭದಲ್ಲಿ ವಿಶೇಷ ಅಧಿವೇಶನ ಕರೆಯಲು ರಾಷ್ಟ್ರಪತಿ ಅವರು ತಮ್ಮ ವಿಶೇಷ ಅಧಿಕಾರ ಬಳಸಬೇಕು ಎಂದು ಕೋರಿದ್ದಾರೆ. ಸದ್ಯ, ದೇಶದಲ್ಲಿ ಲಸಿಕೆ ಅಭಿಯಾನ ಸಮರ್ಪಕವಾಗಿ ನಡೆಯುತ್ತಿಲ್ಲ. ಹಾಸಿಗೆಗಳು, ಆಮ್ಲಜನಕ, ಜೀವರಕ್ಷಕ ಪರಿಕರಗಳ ಕೊರತೆಯೂ ಇದೆ ಎಂದು ಹೇಳಿದ್ದಾರೆ.

‘ದೇಶದಾದ್ಯಂತ ಪರಿಸ್ಥಿತಿ ಗಂಭೀರವಾಗುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, ಲಸಿಕೆ ಕೊರತೆ ಇದೆ. ಆದರೆ, ದೇಶ ಹೊತ್ತಿ ಉರಿಯುವ ಈ ಸಂದರ್ಭದಲ್ಲಿ ಬಿಜೆಪಿಯ ನೀರೊ ಪಶ್ಚಿಮ ಬಂಗಾಳದಲ್ಲಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ತಿವಾರಿ ಈ ಕುರಿತ ಮಾಡಿರುವ ಟ್ವೀಟ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಕೋವಿಡ್‌ ಸಾವುಗಳನ್ನು ನಿಭಾಯಿಸಲು ಆಗದ ಸ್ಥಿತಿ ವಿವಿಧ ಚಿತಾಗಾರ, ರುದ್ರಭೂಮಿಗಳಲ್ಲಿ ಇದೆ. ಒಟ್ಟು ಪರಿಸ್ಥಿತಿ ನಿರ್ವಹಿಸಲು ರಾಷ್ಟ್ರೀಯ ನೀತಿ ಅಗತ್ಯವಿದ್ದು, ಸಂಸತ್ತಿನ ಅಧಿವೇಶನ ಅಗತ್ಯವಾಗಿದೆ ಎಂದು ತಿವಾರಿ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.