ADVERTISEMENT

ತಲೈವಟ್ಟಿ ಮುನಿಯಪ್ಪನ್‌ ಈಗ ಬುದ್ಧ!

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 21:15 IST
Last Updated 5 ಆಗಸ್ಟ್ 2022, 21:15 IST
   

ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ ದೇಗುಲದ ಮುಖ್ಯ ದೇವರ ವಿಗ್ರಹ ‘ತಲೈವೆಟ್ಟಿ ಮುನಿಯಪ್ಪನ್‌’ ಅಲ್ಲ ‘ಬುದ್ಧ’ ಎಂದು ಮದ್ರಾಸ್‌ ಹೈಕೋರ್ಟ್‌ ಘೋಷಿಸಿದೆ.

ಪುರಾತತ್ವ ಇಲಾಖೆ ಆಯುಕ್ತರು ಸಲ್ಲಿಸಿದ ವರದಿ ಪರಿಶೀಲನೆ ಬಳಿಕ ನ್ಯಾಯಾಧೀಶ ಎನ್.ಆನಂದ್‌ ವೆಂಕಟೇಶನ್‌ ಅವರು ಈ ತೀರ್ಪು ನೀಡಿದ್ದಾರೆ. ಜೊತೆಗೆ ದೇಗುಲವನ್ನು ಇಲಾಖೆ ಸ್ವಾಧೀನಕ್ಕೆ ನೀಡುವಂತೆ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಮುಜರಾಯಿ ಇಲಾಖೆಗೆ ಸೂಚಿಸಿದೆ.

ಸೇಲಂನಲ್ಲಿರುವ ಬುದ್ಧ ಟ್ರಸ್ಟ್‌, ತಲೈವಟ್ಟಿ ಮುನಿಯಪ್ಪನ್‌ ದೇಗುಲದ ವಿಗ್ರಹದ ಹಿನ್ನೆಲೆ ಬಗ್ಗೆ ಪರಿಶೀಲನೆ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಸೂಚನೆ ನೀಡಬೇಕು ಎಂದು ನ್ಯಾಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿತ್ತು. ಬಳಿಕ ವಿಗ್ರಹ ಪರಿಶೀಲನೆಗೆ ರಾಜ್ಯ ಪುರಾತತ್ವ ಇಲಾಖೆ ಆಯುಕ್ತರಿಗೆ ಕೋರ್ಟ್‌ ಸೂಚಿಸಿತ್ತು. ಇದು ದೇಗುಲದ ಮೂರ್ತಿ ಬುದ್ಧ ಅವರದ್ದಾಗಿದೆ ಎಂದು ವರದಿ ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.