ADVERTISEMENT

ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ

ಏಜೆನ್ಸೀಸ್
Published 1 ಆಗಸ್ಟ್ 2020, 12:50 IST
Last Updated 1 ಆಗಸ್ಟ್ 2020, 12:50 IST
ರಾಜ್ಯಸಭಾ ಸದಸ್ಯ ಅಮರ್ ಸಿಂಗ್
ರಾಜ್ಯಸಭಾ ಸದಸ್ಯ ಅಮರ್ ಸಿಂಗ್   

ನವದೆಹಲಿ: ಸಮಾಜವಾದಿ ಪಕ್ಷದ ಮಾಜಿ ನಾಯಕ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ (64) ಶನಿವಾರ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ,ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಡಿ.ವಿ.ಸದಾನಂದ ಗೌಡ ಸೇರಿದಂತೆ ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ.‌

ಅನಾರೋಗ್ಯದಿಂದ ಬಳಲುತ್ತಿದ್ದ ಅಮರ್‌ ಸಿಂಗ್‌ ಅವರು ಸಿಂಗಪುರದ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

‘ಅಮರ್‌ ಸಿಂಗ್‌ ಜಿ ಅವರು ಶಕ್ತಿಯುತ ಸಾರ್ವಜನಿಕ ವ್ಯಕ್ತಿಯಾಗಿದ್ದರು. ಕಳೆದ ಕೆಲವು ದಶಕಗಳಲ್ಲಿ, ಅವರು ಕೆಲವು ಪ್ರಮುಖ ರಾಜಕೀಯ ಬೆಳವಣಿಗೆಗಳಿಗೆ ಹತ್ತಿರದಿಂದ ಸಾಕ್ಷಿಯಾದರು. ಅವರು ಜೀವನದ ಹಲವು ಕ್ಷೇತ್ರಗಳಲ್ಲಿ ಸ್ನೇಹಕ್ಕಾಗಿ ಹೆಸರುವಾಸಿಯಾಗಿದ್ದರು. ಅವರ ನಿಧನದಿಂದ ಬೇಸರವಾಯಿತು. ಅವರ ಸ್ನೇಹಿತರು ಮತ್ತು ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

‘ಹಿರಿಯ ನಾಯಕ ಮತ್ತು ಸಂಸದ ಅಮರ್‌ ಸಿಂಗ್‌ ಅವರ ನಿಧನದ ಸುದ್ದಿ ತಿಳಿದು ದುಃಖದ ಭಾವನೆ ಮೂಡಿದೆ. ಸಾರ್ವಜನಿಕ ಜೀವನದಲ್ಲಿ ಅವರು ಎಲ್ಲಾ ಪಕ್ಷಗಳ ನಡುವೆ ಸ್ನೇಹ ಹೊಂದಿದ್ದರು. ಸ್ವಭಾವತಃ ಹಾಸ್ಯಮಯ ಮತ್ತು ಸದಾ ಶಕ್ತಿಯುತವಾಗಿರುತ್ತಿದ್ದರು. ಮೃತರ ಕುಟುಂಬಕ್ಕೆ ನನ್ನ ಸಂತಾಪ’ ಎಂದು ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ರಾಜ್ಯಸಭಾ ಸಂಸದ ಅಮರ್‌ ಸಿಂಗ್‌ ಅವರ ನಿಧನದ ಬಗ್ಗೆ ನನ್ನ ಆಳವಾದ ಸಂತಾಪ. ಅಗಲಿದ ಆತ್ಮವನ್ನು ಸಾಂತ್ವನಗೊಳಿಸಲು ದೇವರನ್ನು ಪ್ರಾರ್ಥಿಸಿ ಮತ್ತು ಕುಟುಂಬಸ್ಥರಿಗೆ ಸಾವಿನ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್‌ ಮಾಡಿದ್ದಾರೆ.

‘ವಾತ್ಸಲ್ಯದಿಂದ ವಂಚಿತರಾಗಿದ್ದಕ್ಕಾಗಿ ಅಮರ್ ಸಿಂಗ್ ಜಿ ಅವರಿಗೆ ಭಾವನಾತ್ಮಕ ಸಂತಾಪ ಮತ್ತು ಗೌರವ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.