ADVERTISEMENT

ಮಹಾರಾಷ್ಟ್ರ 'ತೌತೆ' ಆರ್ಭಟ: ಚಂಡಮಾರುತದ ಪರಿಣಾಮ 11 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 18 ಮೇ 2021, 16:08 IST
Last Updated 18 ಮೇ 2021, 16:08 IST
ಮುಂಬೈನ ಗೇಟ್‌ವೇ ಆಫ್‌ ಇಂಡಿಯಾ ಸಮೀಪ ಬೋರ್ಡ್‌ ತುಂಡರಿಸಿ ಬಿದ್ದಿರುವುದು
ಮುಂಬೈನ ಗೇಟ್‌ವೇ ಆಫ್‌ ಇಂಡಿಯಾ ಸಮೀಪ ಬೋರ್ಡ್‌ ತುಂಡರಿಸಿ ಬಿದ್ದಿರುವುದು   

ಮುಂಬೈ: ಭಾರತದ ಪಶ್ಚಿಮ ಕರಾವಳಿ ಭಾಗದಲ್ಲಿ ತೀವ್ರ ಹಾನಿ ಮಾಡುತ್ತಿರುವ ತೌತೆ ಚಂಡಮಾರುತದಿಂದ ಮಹಾರಾಷ್ಟ್ರದಲ್ಲಿ ಈವರೆಗೂ 11 ಮಂದಿ ಸಾವಿಗೀಡಾಗಿದ್ದಾರೆ.

ವಾಣಿಜ್ಯ ನಗರಿ ಮುಂಬೈ, ಫಾಲ್ಘರ್‌, ಠಾಣೆ, ರತ್ನಗಿರಿ ಹಾಗೂ ಸಿಂಧುದುರ್ಗ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಲ್ಲಿ 11 ಜನ ಮೃತಪಟ್ಟಿದ್ದಾರೆ. ಹಲವು ಭಾಗಗಳಲ್ಲಿ ಬೆಳೆಗಳಿಗೆ ತೀವ್ರ ಹಾನಿಯಾಗಿದೆ.

ಅರಬ್ಬಿ ಸಮುದ್ರದ ಅಲೆಗಳ ರಭಸದಿಂದಾಗಿ ಹಲವು ಹಡಗುಗಳಿಗೆ ಹಾನಿಯಾಗಿದೆ. ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ, ತಂತಿಗಳು ತುಂಡರಿಸಿ ಬಿದ್ದಿವೆ. ಇದರಿಂದಾಗಿ ವಿದ್ಯುತ್‌ ಸಂಪರ್ಕ ಹಾಗೂ ನೀರಿನ ಪೂರೈಕೆ, ಇಂಟರ್‌ನೆಟ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.

ADVERTISEMENT

ವರದಿಗಳ ಪ್ರಕಾರ, 46 ಲಕ್ಷಕ್ಕೂ ಹೆಚ್ಚು ಜನರು ವಿದ್ಯುತ್‌ ಸಂಪರ್ಕ ವ್ಯತ್ಯಯ ಅನುಭವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.