ನವದೆಹಲಿ: ‘ಉಪಗ್ರಹಗಳು, ಡ್ರೋನ್ ಹಾಗೂ ಸೆನ್ಸರ್‌ಗಳು ಯುದ್ಧದ ಸ್ವರೂಪ ಕುರಿತ ವ್ಯಾಖ್ಯಾನವನ್ನೇ ಬದಲಿಸಿವೆ. ಈಗಿನ ಯುದ್ಧದ ತೀವ್ರತೆ ಅಳೆಯಲು ತಿಂಗಳುಗಳು ಬೇಕಿಲ್ಲ, ಕೆಲವೇ ಗಂಟೆ–ಸೆಕೆಂಡ್‌ಗಳು ಸಾಕು’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ಇದೇ ವೇಳೆ, ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಉತ್ತಮ ಕಾರ್ಯಸೂಚಿ ರೂಪಿಸಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಾರ್ಯತಂತ್ರವನ್ನು ಅಳವಡಿಸಿ ಕೊಳ್ಳುವಂತೆಯೂ ಭಾರತೀಯ ಕರಾವಳಿ ಕಾವಲು ಪಡೆಗಳಿಗೆ (ಐಸಿಜಿ) ರಾಜನಾಥ ಕರೆ ನೀಡಿದ್ದಾರೆ.
ಇಲ್ಲಿರುವ ಐಸಿಜಿ ಕೇಂದ್ರ ಕಚೇರಿಯಲ್ಲಿ ನಡೆದ 42ನೇ ಐಸಿಜಿ ಕಮಾಂಡರ್ ಸಮಾವೇಶದಲ್ಲಿ ರಾಜನಾಥ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿ, ‘ಸೈಬರ್ ಹಾಗೂ ಎಲೆಕ್ಟ್ರಾನಿಕ್ ಯುದ್ಧವು ಈಗ ಕಾಲ್ಪನಿಕ ಬೆದರಿಕೆಯಾಗಿ ಉಳಿದಿಲ್ಲ, ವಾಸ್ತವದಲ್ಲಿ ಕಾಡುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.