ADVERTISEMENT

ಬಿಎಂಸಿ ನೋಟಿಸ್‌ ನೀಡಿದ್ದು ಕಾನೂನು ಬಾಹಿರ: ಕಂಗನಾ ವಕೀಲ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 9:55 IST
Last Updated 9 ಸೆಪ್ಟೆಂಬರ್ 2020, 9:55 IST
ವಕೀಲ ರಿಜ್ವಾನ್‌
ವಕೀಲ ರಿಜ್ವಾನ್‌   

ಮುಂಬೈ: ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಬಾಲಿವುಡ್ ನಟಿ ಕಂಗನಾ ರನೋಟ್ ಅವರ ಬಂಗಲೆ ಕೆಡಲು ನೋಟಿಸ್‌ ನೀಡಿರುವುದು ಕಾನೂನು ಬಾಹಿರವಾಗಿದೆ ಎಂದು ಕಂಗನಾ ಪರ ವಕೀಲರಾದ ರಿಜ್ವಾನ್‌ ಸಿದ್ದಿಕಿ ತಿಳಿಸಿದ್ದಾರೆ.

ಕಂಗನಾ ರನೋಟ್ ಅವರ ಬಂಗಲೆ ಕೆಡವದಂತೆ ಬಾಂಬೆ ಹೈಕೋರ್ಟ್‌ ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ (ಬಿಎಂಸಿ) ಬುಧವಾರ ಸೂಚನೆ ನೀಡಿದ ಬಳಿಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಬಿಎಂಸಿ ಅಧಿಕಾರಿಗಳು ನೋಟಿಸ್‌ ನೀಡಿರುವುದು ಕಾನೂನುಗೆ ವಿರುದ್ಧವಾಗಿದೆ. ಅಲ್ಲದೇ ಅಧಿಕಾರಿಗಳು ಕಾರ್ಮಿಕರೊಂದಿಗೆ ಬಂಗಲೆಗೆ ಅಕ್ರಮ ಪ್ರವೇಶ ಮಾಡಿರುವುದು ತಪ್ಪು ಎಂದು ಹೇಳಿದರು. ಕಂಗನಾ ಅವರ ಬಂಗಲೆಯಲ್ಲಿ ಕಾನೂನಿಗೆ ವಿರುದ್ಧವಾಗಿ ಯಾವುದೇ ಕಾಮಗಾರಿಗಳನ್ನು ಮಾಡಿಲ್ಲ ರಿಜ್ವಾನ್‌ ತಿಳಿಸಿದರು.

ಬಿಎಂಸಿ ಮಂಗಳವಾರ ಕಂಗನಾ ಅವರ ಬಂಗಲೆಗೆ ನೋಟಿಸ್ ಅಂಟಿಸಿ, ಸೂಕ್ತ ಅನುಮತಿ ಪಡೆಯದೇ ಕಟ್ಟಡದ ಆವರಣದಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿದ್ದಾರೆ ಎಂದು ಹೇಳಿತ್ತು. ಬುಧವಾರ ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿತ್ತು.

ಈ ಹಿನ್ನೆಲೆಯಲ್ಲಿ ಬಿಎಂಸಿಯ ನೋಟಿಸ್‌ ಪ್ರಶ್ನಿಸಿ ಕಂಗನಾ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್‌ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ತಡೆಯಾಜ್ಞೆ ನೀಡಿದೆ.

ಇನ್ನಷ್ಟು ಓದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.