ADVERTISEMENT

ವಾಡಿಕೆಗಿಂತ ತಡವಾಗಿ ತಗ್ಗಿದ ಬೇಸಿಗೆ ಕಾಲದ ಮಳೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 16:35 IST
Last Updated 6 ಅಕ್ಟೋಬರ್ 2021, 16:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದ ವಾಯವ್ಯ ಭಾಗದಲ್ಲಿ ಬೇಸಿಗೆ ಅವಧಿಯಲ್ಲಿ ಬೀಳುವ ಮಳೆ ಪ್ರಮಾಣ ಬುಧವಾರದಿಂದ ಕಡಿಮೆಯಾಗುತ್ತಿರುವುದು ಕಂಡು ಬಂತು.

ವಾಡಿಕೆಯಂತೆ ಸೆಪ್ಟೆಂಬರ್‌ 17ರಿಂದ ಬೇಸಿಗೆ ಕಾಲದ ಮಳೆ ಕ್ಷೀಣಿಸುತ್ತದೆ. ಆದರೆ, ಈ ಬಾರಿ ವಾಡಿಕೆ ದಿನಕ್ಕಿಂತ ಮೂರು ವಾರಗಳು ತಡವಾಗಿ ಮಳೆ ಬೀಳುವುದು ಕಡಿಮೆಯಾಗುತ್ತಿದೆ.

ಇದು ಕಳೆದ 60 ವರ್ಷಗಳಲ್ಲಿ ಎರಡನೇ ಬಾರಿ ಇಷ್ಟು ತಡವಾಗಿ ನೈರುತ್ಯ ಮುಂಗಾರು ಕ್ಷೀಣಿಸಲು ಆರಂಭಿಸಿದ ವಿದ್ಯಮಾನ ದಾಖಲಾದಂತಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.