ADVERTISEMENT

ಲೆಫ್ಟಿನೆಂಟ್‌ ಗವರ್ನರ್‌ ಹಾಗೂ ನನ್ನ ನಡುವೆ ವೈಮನಸ್ಸು ಇಲ್ಲ: ಕೇಜ್ರಿವಾಲ್‌

ಪಿಟಿಐ
Published 29 ಜುಲೈ 2022, 13:58 IST
Last Updated 29 ಜುಲೈ 2022, 13:58 IST
ಅರವಿಂದ್‌ ಕೇಜ್ರಿವಾಲ್
ಅರವಿಂದ್‌ ಕೇಜ್ರಿವಾಲ್   

ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಇಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ವಿನಯ್‌ ಕುಮಾರ್ ಸಕ್ಸೇನಾ ಅವರನ್ನು ಶುಕ್ರವಾರ ಭೇಟಿಯಾಗಿದ್ದು, ‘ಈ ಭೇಟಿಯು ದೆಹಲಿಯ ಅಭಿವೃದ್ಧಿಗೆ ಹಾಗೂ ಇಬ್ಬರು ಒಟ್ಟುಗೂಡಿ ಕೆಲಸ ಮಾಡಲು ಮುಖ್ಯವಾದುದಾಗಿದೆ’ ಎಂದು ಹೇಳಿದರು.

ಸಕ್ಸೇನಾ ಅವರೊಂದಿಗೆ ನಡೆದ ವಾರದ ಸಭೆಯ ಬಳಿಕ, ‘ಸಭೆಯು ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ನಮ್ಮಿಬ್ಬರ ಮಧ್ಯೆ ಹಲವಾರು ವಿಷಯಗಳ ಕುರಿತು ಅಭಿಪ್ರಾಯ ಭೇದಗಳಿರಬಹುದು. ಆದರೆ ಇಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ’ ಎಂದು ಕೇಜ್ರಿವಾಲ್‌ ಹೇಳಿದರು.‌

ಆಗಸ್ಟ್ 1ರಂದು ಸಿಂಗಪುರದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಅನುಮತಿ ನೀಡಬೇಕು ಎಂಬ ಎಎಪಿ ಸರ್ಕಾರದ ಪ್ರಸ್ತಾವವನ್ನು ಕಳೆದ ವಾರ ಸಕ್ಸೇನಾ ತಿರಸ್ಕರಿಸಿದ್ದರು. ‘ಮೇಯರ್‌ಗಳ ಸಮ್ಮೇಳನದಲ್ಲಿ ಕೇಜ್ರಿವಾಲ್‌ ವರ ಹಾಜರಾತಿಯು ‘ಕೆಟ್ಟ ಪೂರ್ವನಿದರ್ಶನ’ವನ್ನು ನೀಡುತ್ತದೆ’ ಎಂದು ಸಕ್ಸೇನಾ ಹೇಳಿದ್ದರು.

ADVERTISEMENT

ಪ್ರಸ್ತಾವ ತಿರಸ್ಕರಿಸದ ನಂತರ, ಕಳೆದ ಶುಕ್ರವಾರ ವಾರದ ಸಭೆಗೆ ಕೇಜ್ರಿವಾಲ್‌ ಹಾಜರಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.