ADVERTISEMENT

ಹಣ, ಆಭರಣ ಕದ್ದ; ಖಿಚಡಿ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕ ಠಕ್ಕ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 12:54 IST
Last Updated 12 ಜನವರಿ 2022, 12:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಗುವಹಾಟಿ: ಮನೆಯೊಂದರಲ್ಲಿ ಕಳ್ಳತನ ಮಾಡಿದ ಬಳಿಕ ಖಿಚಡಿ ತಯಾರಿಸಲು ಹೋಗಿ ಕಳ್ಳನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಅಸ್ಸಾಂ ಪೊಲೀಸರು ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಆದರೆ ಕಳ್ಳನ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ರಾತ್ರಿ ವೇಳೆ ಯಾರು ಇಲ್ಲದ ಮನೆಗೆ ಕಳ್ಳನೊಬ್ಬ ನುಗಿದ್ದ. ಬೆಲೆ ಬಾಳುವ ವಸ್ತುಗಳನ್ನು ಕದ್ದು ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ. ಮನೆಯಲ್ಲಿ ಯಾರು ಇಲ್ಲವಾದ್ದರಿಂದ ಖಿಚಡಿ ತಯಾರಿಸುತ್ತಿದ್ದ.

ADVERTISEMENT

ಯಾರು ಇಲ್ಲದ ಮನೆಯಲ್ಲಿ ಅಡುಗೆ ಮಾಡುವ ಸದ್ದು ಕೇಳಿದ ನೆರಹೊರೆಯವರು ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣ ಸ್ಥಳಕ್ಕೆ ಆಗಮಿದ ಪೊಲೀಸರು ಕಳ್ಳನನ್ನು ಹಿಡಿದಿದ್ದಾರೆ.

ನಂತರ ಪೊಲೀಸರು ಟ್ವಿಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದರು. ವ್ಯಾಪಕವಾಗಿ ಹರಿದಾಡುತ್ತಿರುವ ಈ ಪೋಸ್ಟ್‌ಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.