ADVERTISEMENT

ಕನ್ನಡದಲ್ಲಿ ಟಿಟಿಡಿ ಭಕ್ತಿ ಚಾನಲ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 16:29 IST
Last Updated 3 ಫೆಬ್ರುವರಿ 2021, 16:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹೈದರಾಬಾದ್‌: ‘ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್‌’ನ (ಎಸ್‌ವಿಬಿಸಿ) ಕನ್ನಡ ಮತ್ತು ಹಿಂದಿ ಚಾನಲ್‌ಗಳು ಯುಗಾದಿ ದಿನವಾದ ಏಪ್ರಿಲ್‌ 13ರಂದು ಆರಂಭವಾಗಲಿವೆ.

ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ನಿರ್ವಹಿಸುವ ‘ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್‌’ ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಅಪಾರ ಜನಪ್ರಿಯವಾಗಿದೆ. ಅಧ್ಯಾತ್ಮದ ಈ ಚಾನಲ್‌ ಅನ್ನು ಹೊಸದಾಗಿ ಎರಡು ಭಾಷೆಗಳಲ್ಲಿ ಆರಂಭಿಸುವ ಬಗ್ಗೆ ಎಸ್‌ವಿಬಿಸಿಯ ಮಂಡಳಿ ಬುಧವಾರ ನಿರ್ಧಾರ ಕೈಗೊಂಡಿದೆ.

ಭಕ್ತಿ ಸಂಗೀತವನ್ನು ಪ್ರಧಾನವಾಗಿಟ್ಟುಕೊಂಡು ಎಸ್‌ವಿಬಿಸಿ ರೇಡಿಯೊ ಆರಂಭಿಸಲು ಸಹ ಟಿಟಿಡಿ ಉದ್ದೇಶಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.