ADVERTISEMENT

ಕಲಬೆರಕೆ ಹಾಲು ಮಾರಾಟ: 32 ವರ್ಷಗಳ ಹಿಂದಿನ ಪ್ರಕರಣದಲ್ಲಿ ವ್ಯಕ್ತಿಗೆ ಜೈಲು

ಪಿಟಿಐ
Published 20 ಜನವರಿ 2023, 5:06 IST
Last Updated 20 ಜನವರಿ 2023, 5:06 IST
   

ಮುಜಾಫರ್‌ನಗರ: ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದಲ್ಲಿ ದೂರು ದಾಖಲಾಗಿ 32 ವರ್ಷಗಳ ಬಳಿಕ ವ್ಯಕ್ತಿಗೆ 6 ತಿಂಗಳು ಜೈಲು ಶಿಕ್ಷೆಯಾಗಿರುವ ಪ್ರಕರಣ ಉತ್ತರಪ್ರದೇಶದ ಮುಜಾಫರ್‌ನಗರದಿಂದ ವರದಿಯಾಗಿದೆ.

ಅಲ್ಲದೆ, ಅಪರಾಧಿ, ಹಾಲು ಮಾರಾಟಗಾರ ಹರ್ಬೀರ್ ಸಿಂಗ್ ಅವರಿಗೆ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ₹5,000 ದಂಡವನ್ನೂ ವಿಧಿಸಿದ್ದಾರೆ.

ಕಲಬೆರಕೆ ಹಾಲು ಮಾರಾಟ ಮಾಡಿದ್ದ ಪ್ರಕರಣದಲ್ಲಿ ಹರ್ಬೀರ್ ಸಿಂಗ್ ದೋಷಿ ಎಂದು ಸಾಬೀತಾಗಿದೆ ಎಂದು ಪೊಲೀಸ್ ಅಧಿಕಾರಿ ರಾಮವತರ್ ಸಿಂಗ್ ಹೇಳಿದ್ದಾರೆ. ಆತ ಮಾರಾಟ ಮಾಡಿದ ಹಾಲಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕಲಬೆರಕೆ ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 21, 1990ರಂದು ಹರ್ಬೀರ್ ಸಿಂಗ್ ವಿರುದ್ಧ ಫುಡ್ ಇನ್ಸ್‌ಪೆಕ್ಟರ್ ಸುರೇಶ್ ಚಾಂದ್ ಪ್ರಕರಣ ದಾಖಲಿಸಿದ್ದರು ಎಂದು ರಾಮವತರ್ ಸಿಂಗ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.