ADVERTISEMENT

ಪುಸ್ತಕ ವಿವಾದ: ಮಾಜಿ ಸೇನಾ ಮುಖ್ಯಸ್ಥ ನರವಣೆ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 14:28 IST
Last Updated 10 ಫೆಬ್ರುವರಿ 2026, 14:28 IST
   

ನವದೆಹಲಿ: ತಮ್ಮ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್‌ ಆಫ್‌ ಡೆಸ್ಟಿನಿ’ ಪುಸ್ತಕದ ಪ್ರಕಟಣೆ ಕುರಿತ ಗೊಂದಲಕ್ಕೆ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಕಾಶನ ಸಂಸ್ಥೆ ‘ಪೆಂಗ್ವಿನ್‌ ಇಂಡಿಯಾ’ದ ಹೇಳಿಕೆಯನ್ನು ಮರು ಹಂಚಿಕೊಂಡಿರುವ ಅವರು, 'ಇದು ಪುಸ್ತಕದ ಸದ್ಯದ ಸ್ಥಿತಿ’ ಎಂದಿದ್ದಾರೆ.

‘ನರವಣೆ ಅವರ ಆತ್ಮಚರಿತ್ರೆ ‘ಫೋರ್ ಸ್ಟಾರ್‌ ಆಫ್‌ ಡೆಸ್ಟಿನಿ’ ಪುಸ್ತಕ ಪ್ರಕಟಣೆಗೊಂಡಿಲ್ಲ’ ಎಂದು ಮಂಗಳವಾರ ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್‌, ಪ್ರಕಾಶನ ಸಂಸ್ಥೆ ಹೇಳಿಕೆಯನ್ನು ನಿರಾಕರಿಸಿದ್ದರು.

ADVERTISEMENT

‘ಪುಸ್ತಕವನ್ನು ಖರೀದಿಸಿ ಎಂದು ನರವಣೆ ಅವರು 2023ರಲ್ಲಿ ಟ್ವೀಟ್ ಮಾಡಿದ್ದರು. ಪುಸ್ತಕ ಪ್ರಕಟಗೊಂಡಿಲ್ಲ ಎಂದು ಪೆಂಗ್ವಿನ್‌ ಇಂಡಿಯಾ ಈಗ ಹೇಳುತ್ತಿದೆ. ಯಾರು ಸುಳ್ಳು ಹೇಳುತ್ತಿರುವುದು’ ಎಂದು ರಾಹುಲ್ ಪ್ರಶ್ನಿಸಿದ್ದರು.

ರಾಹುಲ್‌ ಅವರ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ನರವಣೆ ಅವರು ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.