ADVERTISEMENT

ಬಿಹಾರ: ಸ್ನಾನ ಮಾಡಲು ಗಂಗಾ ನದಿಗೆ ಇಳಿದ ಮೂವರು ನೀರುಪಾಲು

ಏಜೆನ್ಸೀಸ್
Published 2 ಜುಲೈ 2020, 10:16 IST
Last Updated 2 ಜುಲೈ 2020, 10:16 IST
ಬಿಹಾರದಲ್ಲಿ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಮೂವರು ನೀರುಪಾಲು
ಬಿಹಾರದಲ್ಲಿ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಮೂವರು ನೀರುಪಾಲು   

ಬಿಹಾರ (ಎಎನ್ಐ): ಸ್ನಾನ ಮಾಡಲು ಮಾಡಲು ಗಂಗಾ ನದಿಗೆ ಇಳಿದಿದ್ದ ಮೂರು ಮಂದಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಪಾಟ್ನಾದ ಮಲ್ ಸಲಾಮಿ ಪ್ರದೇಶದಲ್ಲಿ ಗುರುವಾರ ಸಂಭವಿಸಿದೆ.

ಈ ಸಂಬಂಧ ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂವರನ್ನು ಮೇಲೆಕ್ಕೆ ತರುವ ಯತ್ನ ನಡೆಸಿದರು. ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಮೂವರಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಮಲ್ ಸಲಾಮಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸುದಾಮಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೂವರು ಸ್ನೇಹಿತರು ಸ್ನಾನಕ್ಕೆಂದು ನೀರಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.