ADVERTISEMENT

ಅಯೋಧ್ಯಾ ನಗರ ಅಭಿವೃದ್ಧಿ: ಮೂರು ಕಂಪನಿಗಳ ಆಯ್ಕೆ

ಪಿಟಿಐ
Published 9 ಫೆಬ್ರುವರಿ 2021, 18:49 IST
Last Updated 9 ಫೆಬ್ರುವರಿ 2021, 18:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಯೋಧ್ಯಾ: ಅಯೋಧ್ಯೆಯನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿಪಡಿಸುವ ಯೋಜನೆ ಅನುಷ್ಠಾನಕ್ಕೆ ಮೂರು ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರದವೈಸ್‌ಚೇರಮನ್‌ ವಿಶಾಲ್‌ ಸಿಂಗ್‌ ಮಂಗಳವಾರ ತಿಳಿಸಿದ್ದಾರೆ.

ಕೆನಡಾ ಮೂಲದ ಬಹುರಾಷ್ಟ್ರೀಯ ಕಂಪನಿ ಎಲ್‌ಇಎ ಅಸೋಸಿಯೇಟ್ಸ್‌ ಸೌಥ್‌ ಏಷ್ಯಾ ಪ್ರೈವೇಟ್‌ ಲಿಮಿಟೆಡ್‌, ಭಾರತದ ಕಂಪನಿಗಳಾದ ಎಲ್‌ಆ್ಯಂಡ್‌ಟಿ ಹಾಗೂ ಕುಕ್ರೇಜಾ ಆರ್ಕಿಟೆಕ್ಟ್ಸ್‌ ಅನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

‘ನಗರದ ಪ್ಲಾನಿಂಗ್‌, ಸಾರಿಗೆ ವ್ಯವಸ್ಥೆ, ಮೂಲಸೌಲಭ್ಯ ಅಭಿವೃದ್ದಿ, ಹಣಕಾಸು, ಪಾರಂಪರಿಕ ಮಹತ್ವ, ಪ್ರವಾಸೋದ್ಯಮ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯಂತಹ ಅಂಶಗಳನ್ನು ಒಳಗೊಂಡ ಸಮಗ್ರ ಯೋಜನೆಯನ್ನು ಈ ಕಂಪನಿಗಳು ಸಿದ್ಧಪಡಿಸಲಿವೆ’ ಎಂದು ತಿಳಿಸಿದರು.

ADVERTISEMENT

ತಿರುಪತಿ ಮಾಸ್ಟರ್‌ಪ್ಲಾನ್‌ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಗೆ ಕೆನಡಾ ಮೂಲದ ಕಂಪನಿಯ ಸಹಭಾಗಿತ್ವ ಇದೆ. ಮಲೇಷ್ಯಾದಲ್ಲಿ ಅನುಷ್ಠಾನಗೊಳಿಸಿರುವ ಕ್ಷಿಪ್ರ ಸಾರಿಗೆ ಯೋಜನೆಯನ್ನು ಕುಕ್ರೇಜಾ ಅಸೋಸಿಯೇಟ್ಸ್‌ ವಿನ್ಯಾಸಗೊಳಿಸಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.