ADVERTISEMENT

ಕೇರಳದಲ್ಲಿ ಮತ್ತೆ ಮೂವರಿಗೆ ‘ಝೀಕಾ’ ವೈರಸ್‌

ಪಿಟಿಐ
Published 22 ಜುಲೈ 2021, 2:29 IST
Last Updated 22 ಜುಲೈ 2021, 2:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ತಿರುವನಂತಪುರ: ಕೇರಳದಲ್ಲಿ ಮತ್ತೆ ಮೂವರಿಗೆ ಝೀಕಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಈ ಸೋಂಕಿಗೆ ಒಳಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಬುಧವಾರ
ತಿಳಿಸಿದ್ದಾರೆ.

ಅನಾಯಾರಾ ಪ್ರದೇಶದ ಇಬ್ಬರು ನಿವಾಸಿಗಳು ಮತ್ತು ಪೆಟ್ಟಾ ವ್ಯಾಪ್ತಿಯ ಒಬ್ಬರಲ್ಲಿ ಹೊಸದಾಗಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಸಚಿವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT