ADVERTISEMENT

ಶಿಮ್ಲಾ: ಮೂರು ಅಂತಸ್ತಿನ ಕಟ್ಟಡ ಕುಸಿತ, ಪ್ರಾಣಾಪಾಯ ಇಲ್ಲ

ಪಿಟಿಐ
Published 9 ಜುಲೈ 2022, 12:26 IST
Last Updated 9 ಜುಲೈ 2022, 12:26 IST
ಕಟ್ಟಡ ಕುಸಿತ
ಕಟ್ಟಡ ಕುಸಿತ   

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಮೂರು ಅಂತಸ್ತಿನ ಕಟ್ಟಡ ಶನಿವಾರ ಕುಸಿದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

ಶಿಮ್ಲಾದ ಚೌಪಾಲ್ ಮಾರುಕಟ್ಟೆಯಲ್ಲಿ ಅಪರಾಹ್ನ 12.30ರ ಹೊತ್ತಿಗೆ ಕಟ್ಟಡ ಕುಸಿದಿದೆ.

ಕಟ್ಟಡ ಕುಸಿಯುವ ಮುನ್ನವೇ ಅಲ್ಲಿದ್ದವರನ್ನುಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುಕೊ ಬ್ಯಾಂಕ್‌ನ ಶಾಖೆ, ಧಾಬಾ, ಬಾರ್ ಹಾಗೂ ಇತರೆ ಕೆಲವು ವ್ಯಾಪಾರ ಸಂಸ್ಥೆಗಳು ಕಟ್ಟಡದಲ್ಲಿದ್ದವು.

ಎರಡನೇ ಶನಿವಾರವಾಗಿದ್ದರಿಂದ ಬ್ಯಾಂಕ್‌ಗೆ ರಜೆ ಇತ್ತು. ಹಾಗಾಗಿ ಏಳು ಉದ್ಯೋಗಿಗಳು ರಜೆಯಲ್ಲಿದ್ದರು ಎಂದು ಶಿಮ್ಲಾದ ಯುಕೊ ಬ್ಯಾಂಕ್ ಶಾಖೆಯ ಮುಖ್ಯ ವ್ಯವಸ್ಥಾಪಕ ರಮೇಶ್ ರಾಧ್ವಾಲ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಸಹ ಟ್ವೀಟ್ ಮೂಲಕ ವಿಡಿಯೊ ಹಂಚಿಕೊಂಡಿದ್ದು, ಭಾರಿ ಮಳೆಯಿಂದಾಗಿ ಕಟ್ಟಡ ಕುಸಿದಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.