ADVERTISEMENT

ಜೈಪುರ: ಮೂರು ಅಂತಸ್ತಿನ ಕಟ್ಟಡ ಕುಸಿತ, ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 7:27 IST
Last Updated 8 ಫೆಬ್ರುವರಿ 2026, 7:27 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಜೈಪುರ: ರಾಜಸ್ಥಾನದ ಕೋಟಾದಲ್ಲಿ ಶನಿವಾರ ರಾತ್ರಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, 15 ಜನರನ್ನು ಅವಶೇಷಗಳಡಿಯಿಂದ ಹೊರಗೆ ಕರೆತರಲಾಗಿದೆ. ಆ ಪೈಕಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ADVERTISEMENT

ಗಾಯಾಳುಗಳಲ್ಲಿ ಎಂಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐದು ಮಂದಿಯನ್ನು ಪ್ರಾಥಮಿಕ ಆರೈಕೆಯ ನಂತರ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೃತರನ್ನು ಆರ್ಯನ್ (20) ಮತ್ತು ಲಕ್ಷ್ಮಣ್ (15) ಎಂದು ಗುರುತಿಸಲಾಗಿದೆ.

‘ಒಟ್ಟು 15 ಜನರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಇಬ್ಬರು ಸಾವಿಗೀಡಾಗಿದ್ದರೆ, ಕೆಲವು ಗಾಯಾಳುಗಳನ್ನು ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ. ಘಟನೆಗೆ ಕಾರಣ ಖಚಿತಪಡಿಸಿಕೊಳ್ಳಲು ತನಿಖೆಗೆ ಆದೇಶಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ಎಂದು ಸಚಿವ ಹೀರಾಲಾಲ್ ನಗರ್ ವರದಿಗಾರರಿಗೆ ತಿಳಿಸಿದರು.

ಕಟ್ಟಡ ಅಕ್ಕಪಕ್ಕದಲ್ಲಿ ಕೆಲವು ಹೊಸ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಕಟ್ಟಡ ಕುಸಿತಕ್ಕೆ ಇದೂ ಕಾರಣವಾಗಿರಬಹುದು ಎಂದು ವಿಭಾಗೀಯ ಆಯುಕ್ತ ಅನಿಲ್ ಅಗರ್ವಾಲ್ ಹೇಳಿದ್ದಾರೆ.

ತಲ್ವಾಂಡಿ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಟ್ಟಡದಲ್ಲಿ ರೆಸ್ಟೋರೆಂಟ್ ಇತ್ತು. ಅಧಿಕಾರಿಗಳ ಪ್ರಕಾರ, ಕುಸಿತದ ಸಮಯದಲ್ಲಿ ಕೆಲವು ಗ್ರಾಹಕರು ಮತ್ತು ಉದ್ಯೋಗಿಗಳು ಉಪಾಹಾರ ಗೃಹದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.