ಶ್ರೀನಗರ: ಕೇಂದ್ರ ಕಾಶ್ಮೀರದ ಗಾಂದೆರ್‌ಬಲ್ ಜಿಲ್ಲೆಯ ಝೋಜಿಲಾ ಪಾಸ್‌ನಲ್ಲಿ ಸೋಮವಾರ ಪ್ರಪಾತಕ್ಕೆ ವಾಹನ ಉರುಳಿ ಬೆಂಗಳೂರಿನ ಮೂವರು ಪ್ರವಾಸಿಗರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗುವೊಂದು ತೀವ್ರವಾಗಿ ಗಾಯಗೊಂಡಿದೆ.
ಚಂಪಕ್‌ದಾಸ್ (67), ಟಂಡ್ರಾದಾಸ್ (44) ಮತ್ತು ಮೋನಾಲಿಸಾ ದಾಸ್ (41) ಮೃತಪಟ್ಟವರು. ಆದ್ರಿತಾ ಖಾನ್ (8) ಎಂಬ ಮಗು ತೀವ್ರವಾಗಿ ಗಾಯಗೊಂಡಿದೆ. ಇವರೆಲ್ಲರೂ ಬೆಂಗಳೂರಿನ ನಿವಾಸಿಗಳು.
ವಾಹನವು ಸೋನಾಮಾರ್ಗ್‌ನಿಂದ ಝೀರೋ ಪಾಯಿಂಟ್‌ಗೆ ತೆರಳುತ್ತಿದ್ದಾಗ ಪಾಣಿಮಠದ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಬಿಪಿ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ತೀವ್ರವಾಗಿ ಗಾಯಗೊಂಡ ಮಗುವನ್ನು ಶ್ರೀನಗರದ ಸೂಪರ್ ಸ್ಪೆಷಾಲಿಟಿ ಸ್ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.