ADVERTISEMENT

ಚಂಡೀಗಡ ಪಿಜಿಯಲ್ಲಿ ಬೆಂಕಿ: ಮೂವರು ಮಹಿಳೆಯರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 13:45 IST
Last Updated 22 ಫೆಬ್ರುವರಿ 2020, 13:45 IST
ಚಂಡೀಗಡದಲ್ಲಿ ಬೆಂಕಿ ಆಕಸ್ಮಿಕ ಮೂವರ ದುರ್ಮರಣ
ಚಂಡೀಗಡದಲ್ಲಿ ಬೆಂಕಿ ಆಕಸ್ಮಿಕ ಮೂವರ ದುರ್ಮರಣ   

ಚಂಡೀಗಡ: ಇಲ್ಲಿನ ಪೇಯಿಂಗ್ ಗೆಸ್ಟ್ (ಮಹಿಳಾ ಪಿಜಿ) ಒಂದರಲ್ಲಿ ಶನಿವಾರ ಬೆಂಕಿ ಅವಘಡದಲ್ಲಿ ಮೂವರು ಮಹಿಳೆಯರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.

ಸೆಕ್ಟರ್ -32 ಎಂಬಲ್ಲಿರುವ ಮಹಿಳಾ ಪಿಜಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೊಠಡಿಗಳು ಇಕ್ಕಟ್ಟಾದ ಕಾರಣ ಮಹಿಳೆಯರು ತಕ್ಷಣಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೆಲವರು ಉರಿಯುವ ಬೆಂಕಿಯಲ್ಲಿಯೇ ಗಾಬರಿಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಬೆಂಕಿಗೆ ಸಿಲುಕಿದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.