ADVERTISEMENT

ಪ್ರಸಿದ್ಧ ಹುಲಿ ಸಂರಕ್ಷಕ ವಾಲ್ಮೀಕ್‌ ಥಾಪರ್ ನಿಧನ

ಪಿಟಿಐ
Published 31 ಮೇ 2025, 7:16 IST
Last Updated 31 ಮೇ 2025, 7:16 IST
<div class="paragraphs"><p>ವಾಲ್ಮೀಕ್‌ ಥಾಪರ್</p></div>

ವಾಲ್ಮೀಕ್‌ ಥಾಪರ್

   

ಚಿತ್ರ: ಎಕ್ಸ್‌

ನವದೆಹಲಿ: ಭಾರತದ ಪ್ರಸಿದ್ಧ ವನ್ಯಜೀವಿ ಸಂರಕ್ಷಕ, ಲೇಖಕ ವಾಲ್ಮೀಕ್ ಥಾಪರ್ ಅವರು ಇಂದು ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ADVERTISEMENT

1952ರಲ್ಲಿ ನವದೆಹಲಿಯಲ್ಲಿ ಜನಿಸಿದ ಥಾಪರ್ ಅವರು ಹುಲಿಗಳ ಅಧ್ಯಯನ ಮತ್ತು ಸಂರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡಿದ್ದ ಅವರು 1988ರಲ್ಲಿ ‘ರಣಥಂಬೋರ್ ಫೌಂಡೇಶನ್’ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದರು.

2005ರಲ್ಲಿ ಸರಿಸ್ಕಾ ಹುಲಿ ಮೀಸಲು ಪ್ರದೇಶದಿಂದ ಹುಲಿಗಳು ಕಣ್ಮರೆಯಾದ ನಂತರ ಹುಲಿ ಮೀಸಲು ಪ್ರದೇಶಗಳ ನಿರ್ವಹಣೆಯನ್ನು ಪರಿಶೀಲಿಸಲು ಯುಪಿಎ ಸರ್ಕಾರವು ಸ್ಥಾಪಿಸಿದ ಟೈಗರ್‌ ಟಾಸ್ಕ್‌ ಫೋರ್ಸ್‌ನ ಸದಸ್ಯರಾಗಿ ಥಾಪರ್ ಅವರನ್ನು ನೇಮಿಸಲಾಗಿತ್ತು.

ಥಾಪರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್, ಜೀವವೈವಿಧ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಅಸಾಧಾರಣ ಜ್ಞಾನ ಹೊಂದಿದ್ದ ಥಾಪರ್ ನಿಧನ ದುಃಖ ತಂದಿದೆ ಎಂದು ಹೇಳಿದ್ದಾರೆ.

ಥಾಪರ್ ಅವರ ತಂದೆ ರಮೇಶ್ ಥಾಪರ್ ಒಬ್ಬ ಪ್ರಸಿದ್ಧ ಪತ್ರಕರ್ತರಾಗಿದ್ದರು. ಅವರ ಚಿಕ್ಕಮ್ಮ ರೊಮಿಲಾ ಥಾಪರ್ ಇತಿಹಾಸ ಅಧ್ಯಯನದಲ್ಲಿ ಪ್ರಸಿದ್ದಿ ಪಡೆದಿದ್ದರು. ಪತ್ರಕರ್ತ ಕರಣ್ ಥಾಪರ್ ಅವರು ವಾಲ್ಮೀಕ್‌ ಥಾಪರ್ ಅವರ ಸಹೋದ ಸಂಬಂಧಿಯಾಗಿದ್ದಾರೆ.

ನಟ ಶಶಿ ಕಪೂರ್ ಅವರ ಪುತ್ರಿ, ರಂಗಭೂಮಿ ಕಲಾವಿದೆ ಸಂಜನಾ ಕಪೂರ್ ಅವರನ್ನು ಧಾಪರ್ ಅವರು ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗನಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.