ADVERTISEMENT

ಕೇರಳ | ಒಂದೇ ಗುಂಡಿಗೆ ಬಿದ್ದ ಹುಲಿ, ನಾಯಿ ರಕ್ಷಣೆ

ಪಿಟಿಐ
Published 8 ಜೂನ್ 2025, 12:48 IST
Last Updated 8 ಜೂನ್ 2025, 12:48 IST
<div class="paragraphs"><p>ಒಂದೇ ಗುಂಡಿಗೆ ಬಿದ್ದದ್ದ ಹುಲಿ, ನಾಯಿ </p></div>

ಒಂದೇ ಗುಂಡಿಗೆ ಬಿದ್ದದ್ದ ಹುಲಿ, ನಾಯಿ

   

ಎಕ್ಸ್ ಚಿತ್ರ

ಇಡುಕ್ಕಿ (ಕೇರಳ): ತಮಿಳುನಾಡು ಗಡಿಯಲ್ಲಿರುವ ಮಯಿಲಾದುಂಪರೈ ಬಳಿ 9 ಅಡಿ ಆಳದ ಗುಂಡಿಯೊಂದರಲ್ಲಿ ಸಿಲುಕಿದ್ದ ಹುಲಿ ಮತ್ತು ನಾಯಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ADVERTISEMENT

ಹುಲಿ, ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ವೇಳೆ ಗುಂಡಿಗೆ ಬಿದ್ದಿವೆ. ಭಾನುವಾರ ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಘಟನೆ ನಡೆದಿದೆ. ಹುಲಿಯನ್ನು ಶಾಂತಗೊಳಿಸಲು ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ನಾಯಿಯೂ ಬೊಗಳುತ್ತಿದ್ದ ಕಾರಣ ಅದಕ್ಕೂ ಅರವಳಿಕೆ ನೀಡಿ ಶಾಂತಗೊಳಿಸಲಾಗಿತ್ತು. ಮಧ್ಯಾಹ್ನದ ವೇಳೆ ಹುಲಿ ಪ್ರಶಾಂತವಾಗಿತ್ತು. ಬಲೆಯ ಮೂಲಕ ಎರಡೂ ಪ್ರಾಣಿಯನ್ನು ಮೇಲಕ್ಕೆತ್ತಲಾಗಿದೆ. ಪ್ರಾಣಿಗಳಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಹುಲಿಯನ್ನು ಪೆರಿಯಾರ್‌ ಪ್ರಾಣಿಧಾಮಕ್ಕೆ ಬಿಡುಗಡೆ ಮಾಡಲಾಗಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಹುಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.