ADVERTISEMENT

ಯೋಗಿ ಹೇಳಿಕೆಗೆ ಭೀಮ್‌ ಆರ್ಮಿ ಪ್ರತಿಕ್ರಿಯೆ: ಹನುಮಾನ್‌ ಧಾಮ್‌ನಲ್ಲಿ ಭದ್ರತೆ

ಪಿಟಿಐ
Published 9 ಡಿಸೆಂಬರ್ 2018, 3:48 IST
Last Updated 9 ಡಿಸೆಂಬರ್ 2018, 3:48 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ    

ಮುಜಾಫ್ಫರ್‌ನಗರ: ಶುಕ್ರತಾಲ್‌ನಲ್ಲಿರುವ ಹನುಮಾನ್‌ ಧಾಮ್‌ ದೇವಸ್ಥಾನವನ್ನುಭೀಮ್‌ ಆರ್ಮಿ ಸಂಘಟನಾಕಾರರು ತಮ್ಮ ಸುಪರ್ದಿಗೆ ಪಡೆಯುವ ಸಾಧ್ಯತೆ ಇರುವ ಕಾರಣ ದೇವಸ್ಥಾನದ ಸುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

‘ದೇಶದ ಎಲ್ಲ ಹನುಮ ದೇವಸ್ಥಾನಗಳನ್ನು ದಲಿತರು ಸುಪರ್ದಿಗೆ ತೆಗೆದುಕೊಳ್ಳಬೇಕು ಮತ್ತು ಅಲ್ಲಿ ದಲಿತರನ್ನೇ ಪುರೋಹಿತರ
ನ್ನಾಗಿ ನೇಮಿಸಿಕೊಳ್ಳಬೇಕು ಎಂದು ಭೀಮ್ ಆರ್ಮಿ ಸಂಘಟನೆ ಮುಖ್ಯಸ್ಥ ಚಂದ್ರಶೇಖರ್‌ ಹೇಳಿಕೆ ನೀಡಿದ್ದರು. ಹೀಗಾಗಿ ಸ್ಥಳದಲ್ಲಿಪೊಲೀಸ್‌ ಪಡೆ ನಿಯೋಜಿಸಲಾಗಿದೆ.

ರಾಜಸ್ಥಾನದ ಅಲ್ವರ್‌ನಲ್ಲಿ ನಡೆದ ರ‍್ಯಾಲಿ ಸಂದರ್ಭದಲ್ಲಿ‌ ‘ಹನುಮಂತ ವಂಚಿತ, ದಲಿತ ಮತ್ತು ಅರಣ್ಯವಾಸಿ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಚಂದ್ರಶೇಖರ್‌ ಹೀಗೆ ಪ್ರತಿಕ್ರಿಯಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.