ADVERTISEMENT

ತಿರುಮಲ: ವೆಂಕಟೇಶ್ವರ ದರ್ಶನಕ್ಕಾಗಿ 48 ಗಂಟೆ ಸರತಿಯಲ್ಲಿ ನಿಂತ ಭಕ್ತರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 6:25 IST
Last Updated 9 ಅಕ್ಟೋಬರ್ 2022, 6:25 IST
ತಿರುಪತಿ
ತಿರುಪತಿ   

ಹೈದರಾಬಾದ್‌: ಭಾರಿ ಸಂಖ್ಯೆಯಲ್ಲಿ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಿರುವ ಕಾರಣ ವೆಂಕಟೇಶ್ವರ ದರ್ಶನಕ್ಕೆ ಶನಿವಾರ 48 ಗಂಟೆಗಳಿಗಿಂತಲೂ ಹೆಚ್ಚು ಸಮಯ ತಗುಲಿದೆ.

ಈ ಕುರಿತು ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಅಧಿಕಾರಿಗಳು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ದಸರಾ ರಜೆ ಕಾರಣ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಜೊತೆಗೆ ಭಾದ್ರಪದ ಮಾಸದ ಮೂರನೇ ವಾರವೂ ಇದಾಗಿರುವುದರಿಂದ ಯಾತ್ರಿಗಳ ಸಂಖ್ಯೆ ಹೆಚ್ಚಾಗಿದೆ. ಭಾನುವಾರದ ನಂತರ ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗುವ ನಿರೀಕ್ಷೆ ಇದೆ’ ಎಂದಿದ್ದಾರೆ.

ಶುಕ್ರವಾರವೂ ಸರ್ವ ದರ್ಶನ ಸರತಿಯಲ್ಲಿ ಜನರು 48 ಗಂಟೆಗಳ ಕಾಲ ಕಾಯಬೇಕಾಯಿತು. ಶುಕ್ರವಾರ ಸಂಜೆ ಭಕ್ತರಿಗೆ ಸರತಿ ಸಾಲಿನಲ್ಲಿ ನಿಲ್ಲುವ ಅವಕಾಶವನ್ನು ನಿರಾಕರಿಸಲಾಗಿತ್ತು. ಶನಿವಾರ ಸರತಿ ಸಾಲು ಶ್ರೀವಾರಿ ದೇವಾಲಯದಿಂದ 3 ಕಿ.ಮೀ ದೂರದಲ್ಲಿರುವ ಗೋಗರ್ಭಮ್‌ ದೇವಾಲಯದ ವರೆಗೂ ಇತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.