ಬಾಲಜಿ ದೇವಸ್ಥಾನ, ತಿರುಮಲ
– ಇನ್‌ಸ್ಟಾಗ್ರಾಮ್ ಚಿತ್ರ
ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಮ್ಸ್‌ನ (ಟಿಟಿಡಿ) ‘ಶ್ರೀ ಬಾಲಾಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆ’ಗೆ ಬೆಂಗಳೂರು ಮೂಲದ ಭಕ್ತರೊಬ್ಬರು ಒಂದು ಕೋಟಿಗೂ ಅಧಿಕ ರೂಪಾಯಿ ದಾನ ಮಾಡಿದದಾರೆ.
ತಿರುಮಲದಲ್ಲಿರುವ ಕ್ಯಾಂಪ್ ಕಚೇರಿಯಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ಡು ಅವರಿಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ದೇಣಿಗೆ ಹಸ್ತಾಂತರಿಸಿದ್ದಾರೆ.
‘ಬೆಂಗಳೂರಿನ ಅನಾಮಿಕ ದಾನಿಯೊಬ್ಬರು ಶ್ರೀ ಬಾಲಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆಗೆ ₹ 1,00,50,000 (ಒಂದು ಕೋಟಿ ಐವತ್ತು ಸಾವಿರ) ದೇಣಿಗೆ ನೀಡಿದ್ದಾರೆ’ ಎಂದು ಟಿಟಿಡಿ ಅಧಿಕಾರಿಗಳು ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಿಟಿಡಿ ಆಡಳಿತದ ಶ್ರೀ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಡಿ (ಎಸ್‌ವಿಐಎಂಎಸ್) ಶ್ರೀ ಬಾಲಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆ ಇದ್ದು, ಬಡವರು ಮತ್ತು ಅಂಗವಿಕಲರಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳು ಒದಗಿಸುವ ಉದ್ದೇಶ ಹೊಂದಿದೆ.
ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇಗುಲ ತಿರುಪತಿಯ ಶ್ರೀ ವೆಂಕಟೇಶ್ವರ ದೇಗುಲದ ಮೇಲುಸ್ತುವಾರಿಯನ್ನು ಟಿಟಿಡಿ ನೋಡಿಕೊಳ್ಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.