ADVERTISEMENT

ಅತ್ತಿಗೆ ಜೊತೆ ಸಲಿಗೆಯೇ ಕೊಲೆಗೆ ಕಾರಣ- ತಿವಾರಿ ಕೊಲೆ ರಹಸ್ಯ ಬಯಲು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 11:07 IST
Last Updated 26 ಏಪ್ರಿಲ್ 2019, 11:07 IST
ರೋಹಿತ್ ತಿವಾರಿ ಕೊಲೆ ರಹಸ್ಯ ಬಯಲು
ರೋಹಿತ್ ತಿವಾರಿ ಕೊಲೆ ರಹಸ್ಯ ಬಯಲು   

ನವದೆಹಲಿ: ನನ್ನ ಗಂಡ ತನ್ನ ಅತ್ತಿಗೆ ಜೊತೆ ಅತಿ ಸಲಿಗೆಯಿಂದ ಇದ್ದುದೇ ಈ ಕೃತ್ಯಎಸಗಲು ಕಾರಣ ಎಂದು ರೋಹಿತ್ ತಿವಾರಿ ಕೊಲೆ ಪ್ರಕರಣದ ಆರೋಪಿ ಆತನಪತ್ನಿ ಅಪೂರ್ವ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆತ 'ಅತ್ತಿಗೆ ಹಾಗೂ ನಾನು' ಇಬ್ಬರೂಸೇರಿ ಒಂದೇ ಗ್ಲಾಸಿನಲ್ಲಿ ಮದ್ಯ ಸೇವನೆ ಮಾಡಿದ್ದೆವು ಎಂದು ನನ್ನ ಬಳಿ ಹೇಳಿದ. ಆಗ ನನಗೆ ಕೋಪ ಬಂದು ಆತನ ಕುತ್ತಿಗೆ ಹಿಡಿದು ಅದುಮಿದೆ. ನಂತರ ದಿಂಬಿನಿಂದ ಉಸಿರುಗಟ್ಟಿಸಿದೆ ಎಂದು ಕೊಲೆಯಾದ ರೋಹಿತ್ ಶೇಖರ್ ತಿವಾರಿ ಪತ್ನಿ ಅಪೂರ್ವ ಹೇಳಿದ್ದಾರೆ.

ಅಪೂರ್ವ ಅವರು ನೀಡಿರುವ ಹೇಳಿಕೆಯಂತೆ, ಅಂದು ಕೊಲೆ ನಡೆದ ದಿನ ಇಬ್ಬರ ನಡುವೆ ಜಗಳ ನಡೆಯಿತು. ರೋಹಿತ್ ಗೆ ನಿನ್ನ ಅತ್ತಿಗೆ ಜೊತೆ ಸಲಿಗೆಯಿಂದ ಇರಬಾರದು, ಅಲ್ಲದೆ, ಇಬ್ಬರು ಜೊತೆಯಾಗಿ ಕುಡಿಯಬಾರದು ಎಂದು ಹೇಳಿದೆ. ಅದಕ್ಕೆ ಆತ ತಾನು ಉತ್ತರಾಖಂಡದಿಂದ ಬರುವಾಗ ನಾನು ಮತ್ತು ಅತ್ತಿಗೆ ಒಂದೇ ಗ್ಲಾಸಿನಲ್ಲಿ ಮದ್ಯ ಸೇವನೆ ಮಾಡಿದ್ದೆವು ಎಂದು ನನ್ನ ಬಳಿಯೇ ಹೇಳಿದ. ಆಗ ಕೋಪ ಬಂದು ಆತನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದೆ. ಆತ ಎಚ್ಚರಿಕೆ ಗಂಟೆ ಒತ್ತಲು ಪ್ರಯತ್ನಿಸಿದ, ಕೂಡಲೆ ದಿಂಬಿನಿಂದ ಅದುಮಿ ಆತನ ಪ್ರಯತ್ನವನ್ನು ತಡೆದೆ ಎಂದಿದ್ದಾರೆ.

ADVERTISEMENT

ರಾಜಕಾರಣಿ ಹಾಗೂಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಎನ್.ಡಿ.ತಿವಾರಿ ಪುತ್ರ ರೋಹಿತ್ ಶೇಖರ್ ತಿವಾರಿಯನ್ನು ಏಪ್ರಿಲ್ 15ರ ರಾತ್ರಿ ದಕ್ಷಿಣ ದೆಹಲಿಯಡಿಫೆನ್ಸ್ ಕಾಲೋನಿಯಆತನ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಮೊದಲಿಗೆ ಹೃದಯಾಘಾತ ಎಂದು ಬಿಂಬಿಸಲಾಗಿತ್ತು, ಶವಪರೀಕ್ಷೆ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ನಂತರ ಪೊಲೀಸರು ವಿಚಾರಣೆ ನಡೆಸಿ ಆತನ ಪತ್ನಿ ಅಪೂರ್ವ ಅವರನ್ನು ನಾಲ್ಕು ದಿನಗಳ ಹಿಂದೆ ಬಂಧಿಸಿದ್ದಾರೆ.

ರೋಹಿತ್ ಹಾಗೂ ಅಪೂರ್ವ ನಡುವೆ ಸಂಬಂಧ ಹಾಳಾಗಲು ಆತನ ತಾಯಿ ಉಜ್ವಲಾ ಕಾರಣ. ಆತ ತನ್ನ ಅತ್ತಿಗೆ ಜೊತೆ ಸಲುಗೆಯಿಂದ ಇದ್ದುದರಿಂದಲೇ ಮನೆಯಲ್ಲಿಜಗಳ ನಡೆಯುತ್ತಿತ್ತು. ಆಗ ನಮ್ಮಿಬ್ಬರ ಜಗಳದನಡುವೆ ನಮ್ಮ ಅತ್ತೆ ಬರುತ್ತಿದ್ದರು. ಇದು ಜಗಳ ಹೆಚ್ಚಾಗಲು ಕಾರಣವಾಗುತ್ತಿತ್ತು ಎಂದಿದ್ದಾರೆ. ಒಮ್ಮೆ ಒಂದು ಹೇಳಿಕೆ ನೀಡುವ ಅಪೂರ್ವ, ಮತ್ತೊಮ್ಮೆ ಮೌನವಾಗಿರುತ್ತಾರೆ. ಇನ್ನೊಂದು ಸಂದರ್ಭದಲ್ಲಿ ಬೇರೆ ಹೇಳಿಕೆ ನೀಡುತ್ತಾರೆ. ಹೀಗೆ ಅಪೂರ್ವ ಕ್ಷಣಕ್ಕೊಂದು ಹೇಳಿಕೆ ನೀಡಿ ತನಿಖಾಧಿಕಾರಿಗಳನ್ನೇ ಗೊಂದಲದಲ್ಲಿ ಸಿಲುಕಿಸುತ್ತಿದ್ದಾರೆ ಎನ್ನಲಾಗಿದೆ.

ಜಗಳದ ನಡುವೆ ರೋಹಿತ್ ತಿವಾರಿಯ ಚರ್ಮ ಅಪೂರ್ವ ಅವರ ಉಗುರುಗಳಲ್ಲಿ ಸಿಲುಕಿರುವ ಸಾಧ್ಯತೆ ಇರುವುದರಿಂದ ಪೊಲೀಸರು ಅಪೂರ್ವ ಅವರ ಉಗುರುಗಳ ಸ್ಯಾಂಪಲ್‌‌ಗಳನ್ನೂ ಪಡೆದುಕೊಂಡಿದ್ದಾರೆ. ಡಿಎನ್‌‌ಎ ಪರೀಕ್ಷೆಯಲ್ಲಿ ಸಿಗುವ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುವತ್ತ ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಡಿಫೆನ್ಸ್ ಕಾಲೋನಿಯಲ್ಲಿನ ಮನೆಯ ದೂರವಾಣಿ ಸಂಖ್ಯೆಯ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

ರೋಹಿತನ ಉಸಿರಾಟಕ್ಕೆ ತೊಂದರೆ ಉಂಟಾಗಿದೆ ಎಂದು ಕಂಡು ಬಂದಿದೆ ಎಂದು ಆತನನ್ನ ಸಿಟಿ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ಅಲ್ಲಿನ ವೈದ್ಯರು ಆತ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆಕೆ ಕೊಲೆ ಮಾಡಿದ ಕೂಡಲೆ ಹಲವು ಬಾರಿ ಕೊಠಡಿಯನ್ನು ಪ್ರವೇಶಿಸಿದ್ದಾರೆ. ಅಲ್ಲದೆ,ಕೊಲೆ ನಡೆದ ಕೂಡಲೆ ಅಪೂರ್ವ ರಗ್ಗು ಹಾಗೂ ದಿಂಬುಗಳನ್ನು ಬದಲಾಯಿಸಿದ್ದು, ಸಾಕ್ಷ್ಯಗಳ ನಾಶ ಮಾಡಲು ಯತ್ನಿಸಿದ್ದಾರೆ ಪೊಲೀಸರು ತಿಳಿಸಿದ್ದಾರೆ.

ಅಪೂರ್ವ ಸುಮಾರು 14 ಗಂಟೆಗಳ ಕಾಲ ತನ್ನ ಗಂಡನ ಕೊಲೆ ಮಾಡಿದ್ದನ್ನು ಮುಚ್ಚಿಟ್ಟಿದ್ದಾಳೆ.ಕೊಲೆ ಮಾಡುವ ಸಲುವಾಗಿಯೇ ಅಪೂರ್ವ ತನ್ನ ಗಂಡನಿಗೆ ಡ್ರಗ್ಸ್ ನೀಡಿದ್ದಾಳೆ. ಆತ ಮಲಗಿದ ಮೇಲೆ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ತಿವಾರಿ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಮೃತ ದೇಹದಿಂದ ವಿಸೇರಾ ಸಂಗ್ರಹಿಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಸತ್ಯಾಂಶ ಬಯಲಿಗೆ ಬರಲಿದೆ ಎಂದಿದ್ದಾರೆ.

ರಗ್ಗು ಹಾಗೂ ದಿಂಬುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ತಿವಾರಿ ಕೋಪಿಷ್ಟನಾಗಿದ್ದ, ಕಳೆದ ವರ್ಷದಿಂದ ಹಲವು ವಿಷಯಗಳ ಕುರಿತು ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.