ADVERTISEMENT

ದೀದಿ ನಾಡಲ್ಲಿ ಪಕ್ಷಾಂತರ: ಬಿಜೆಪಿ ಸೇರಿದ ಟಿಎಂಸಿ ಶಾಸಕ, 12 ಕಾರ್ಪೊರೇಟರ್‌ಗಳು 

ಏಜೆನ್ಸೀಸ್
Published 18 ಜೂನ್ 2019, 12:51 IST
Last Updated 18 ಜೂನ್ 2019, 12:51 IST
   

ನವದೆಹಲಿ: ಲೋಕಸಭೆ ಚುನಾವಣೆ ನಂತರ ಪಶ್ಚಿಮ ಬಂಗಾಳದಲ್ಲಿ ಆರಂಭವಾದ ಪಕ್ಷಾಂತರ ಪರ್ವ ಮತ್ತೂ ಮುಂದುವರಿದಿದೆ. ತೃಣಮೂಲ ಕಾಂಗ್ರೆಸ್‌ನ ಒಬ್ಬ ಶಾಸಕರು ಮತ್ತು 12 ಮಂದಿ ನಗರ ಪಾಲಿಕೆ ಸದಸ್ಯರು ಮಂಗಳವಾರ ಬಿಜೆಪಿಗೆ ಜಿಗಿದಿದ್ದಾರೆ.

ಬೊಂಗೌನ್‌ ಕ್ಷೇತ್ರದ ಟಿಎಂಸಿ ಶಾಸಕ ಬಿಸ್ವಜೀತ್‌ ದಾಸ್‌, ಕಾಂಗ್ರೆಸ್‌ನ ವಕ್ತಾರ ಪ್ರಸನ್‌ಜೀತ್‌ ಘೋಷ್‌ ಮತ್ತು 12 ಪಾಲಿಕೆ ಸದಸ್ಯರು ಬಿಜೆಪಿ ನಾಯಕ ವಿಜಯ ವರ್ಗೀಯ ಮತ್ತು ಮುಕುಲ್‌ ರಾಯ್‌ ಅವರ ನೇತೃತ್ವದಲ್ಲಿ ಬಿಜೆಪಿ ಬಾವುಟ ಹಿಡಿದರು.

ಲೋಕಸಭೆ ಚುನಾವಣೆ ನಂತರ ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಆರಂಭವಾಗಿದೆ. ಟಿಎಂಸಿಯ 5 ಶಾಸಕರು ಮತ್ತು 60ಕ್ಕಿಂತಲೂ ಹೆಚ್ಚು ನಗರ ಪಾಲಿಕೆ ಸದಸ್ಯರು ಟಿಎಂಸಿ ತೊರೆದುಬಿಜೆಪಿಗೆ ಸೇರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.