ADVERTISEMENT

ಮಮತಾ ಮೇಲಿನ ಹಲ್ಲೆಗೆ ಖಂಡನೆ: ಟಿಎಂಸಿ ಪ್ರತಿಭಟನೆ

ಪಿಟಿಐ
Published 11 ಮಾರ್ಚ್ 2021, 8:10 IST
Last Updated 11 ಮಾರ್ಚ್ 2021, 8:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರು ಗುರುವಾರ ‍ರಾಜ್ಯದಾದ್ಯಂತಪ್ರತಿಭಟನೆ ನಡೆಸಿದರು.

ಕೋಲ್ಕತಾ ನಗರದ ವಿವಿಧ ಭಾಗಗಳು ಸೇರಿದಂತೆ, ರಾಜ್ಯದ ಉತ್ತರ 24 ಪರಗಣ, ಹೂಗ್ಲಿ, ಹೌರಾ, ಬೀರ್ಭಮ್‌, ದಕ್ಷಿಣ 24 ಪರಗಣಗಳು, ಜಲ್ಪೈಗುರಿ ಜಿಲ್ಲೆಗಳಲ್ಲಿ ಕಾರ್ಯಕರ್ತರು ಪ್ರತಿಭಟನೆ ಜತೆಗೆ ಕೆಲವು ಕಡೆ ರಸ್ತೆ ತಡೆ ನಡೆಸಿದರು.

ಪ್ರತಿಭಟನೆ ವೇಳೆ ಮಮತಾ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ADVERTISEMENT

ಮಮತಾ ಅವರ ಮೇಲೆ ದಾಳಿ ನಡೆದ ನಂದಿಗ್ರಾಮದ ಬರುಲಿಯಾ ಬಜಾರ್‌ನಲ್ಲಿ ಕಾರ್ಯಕರ್ತರು ಟೈರ್‌ ಸುಟ್ಟು ಪ್ರತಿಭಟನೆ ನಡೆಸಿದರು.

ಇದಕ್ಕೂ ಮುನ್ನ ಬರುಲಿಯಾ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ನಡೆಯಿತು. ‘ತಕ್ಷಣವೇ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು‘ ಎಂದು ಪೊಲೀಸರು ತಿಳಿಸಿದ್ದಾರೆ.

ಮಮತಾ ಅವರು ಶೀಘ್ರ ಚೇತರಿಸಲಿ ಎಂದು ಹಾರೈಸಿ ನಂದಿಗ್ರಾಮದ ಪಿರ್ಬಾಬದ ವಿವಿಧ ದೇವಾಲಯಗಳಲ್ಲಿ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.