ADVERTISEMENT

ನನಗೆ ರಾಜಕೀಯ ಒಗ್ಗಲ್ಲ: ದೀದಿ ಬಳಿ MP ಮಿಮಿ ಚಕ್ರವರ್ತಿ ಅಳಲು; ರಾಜೀನಾಮೆ ಇಂಗಿತ

ಪಿಟಿಐ
Published 15 ಫೆಬ್ರುವರಿ 2024, 13:38 IST
Last Updated 15 ಫೆಬ್ರುವರಿ 2024, 13:38 IST
<div class="paragraphs"><p>ಮಿಮಿ ಚಕ್ರವರ್ತಿ </p></div>

ಮಿಮಿ ಚಕ್ರವರ್ತಿ

   

ಕೋಲ್ಕತ್ತ: ಜನಪ್ರಿಯ ಬಂಗಾಳಿ ನಟಿ, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ‘ರಾಜಕೀಯ ನನ್ನ ಕಾರ್ಯಕ್ಷೇತ್ರವಲ್ಲ’ ಎಂದಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರುವಾರ ಭೇಟಿಯಾದ ಮಿಮಿ ಚಕ್ರವರ್ತಿ, ರಾಜೀನಾಮೆ ಸಲ್ಲಿಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

‘ಇಂದು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದೇನೆ. ಫೆಬ್ರುವರಿ 13ರಂದೇ ರಾಜೀನಾಮೆ ಪತ್ರ ಸಲ್ಲಿಸಿದ್ದೆ. ರಾಜಕೀಯ ನನಗೆ ಒಗ್ಗುವುದಿಲ್ಲ ಎಂಬ ವಿಷಯವನ್ನು ಇಷ್ಟು ವರ್ಷದಲ್ಲಿ ನಾನು ಕಂಡುಕೊಂಡಿದ್ದೇನೆ’ ಎಂದು ತಿಳಿಸಿದ್ದಾರೆ.

ನಿಯಮಾನುಸಾರ ರಾಜೀನಾಮೆ ಪತ್ರವನ್ನು ಲೋಕಸಭಾ ಸ್ಪೀಕರ್ ಅವರಿಗೆ ಸಲ್ಲಿಸದೆ ಮಮತಾ ಬ್ಯಾನರ್ಜಿ ಅವರಿಗೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪಕ್ಷದಿಂದ ಒಪ್ಪಿಗೆ ದೊರೆತ ನಂತರ ಸ್ಪೀಕರ್‌ಗೆ ಸಲ್ಲಿಸುತ್ತೇನೆ’ ಎಂದರು.

ಏತನ್ಮಧ್ಯೆ, ಮಿಮಿ ಅವರ ರಾಜೀನಾಮೆಯನ್ನು ಮಮತಾ ಬ್ಯಾನರ್ಜಿ ಅವರು ಅಂಗೀಕರಿಸಿದ್ದಾರೆಯೇ? ಎಂಬುದು ಸ್ಪಷ್ಟವಾಗಿಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಮಿಮಿ, ಜಾದವ್‌ಪುರದಿಂದ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.