ADVERTISEMENT

ಮೆಟ್ಟೂರು ಜಲಾಶಯ ನೀರು ಪೋಲಾಗದಂತೆ ಎಚ್ಚರ ವಹಿಸಿ: ಎಐಎಡಿಎಂಕೆ

ಕಲ್ಲಾಣೈ ಜಲಾಶಯದ ಗೇಟುಗಳ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ರೈತರಲ್ಲಿ ಆತಂಕ

ಪಿಟಿಐ
Published 24 ಮೇ 2022, 13:27 IST
Last Updated 24 ಮೇ 2022, 13:27 IST
ಮೆಟ್ಟೂರು ಜಲಾಶಯ –ಪಿಟಿಐ
ಮೆಟ್ಟೂರು ಜಲಾಶಯ –ಪಿಟಿಐ   

ಚೆನ್ನೈ:ಮೆಟ್ಟೂರು ಜಲಾಶಯದಿಂದ ಬಿಡುಗಡೆಯಾದ ನೀರು ವ್ಯರ್ಥವಾಗದಂತೆ ಮತ್ತು ಸಂಪೂರ್ಣವಾಗಿ ನೀರಾವರಿಗೆ ಬಳಕೆಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಎಐಎಡಿಎಂಕೆ ಸಂಯೋಜಕ ಒ.ಪನ್ನೀರ್‌ಸೇಲ್ವಂ ಕರೆ ನೀಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸ್ಟಾಲಿನ್‌ ಅವರಲ್ಲಿ ಮನವಿ ಮಾಡಿರುವ ಅವರು, ಕಲ್ಲಾಣೈ ಜಲಾಶಯದ ಗೇಟುಗಳ ನವೀಕರಣ ಕಾರ್ಯ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದಿದ್ದರೆ ಮೆಟ್ಟೂರು ಜಲಾಶಯದಿಂದ ಹೊರಬಿಟ್ಟ ನೀರು ಪೋಲಾಗುವ ಸಾಧ್ಯತೆ ಇದೆ ಎಂದು ರೈತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಮೆಟ್ಟೂರು ಜಲಾಶಯದಿಂದ ಹೊರಬಿಟ್ಟ ನೀರು ಮೇ 26 ಅಥವಾ 27ರಂದುಕಲ್ಲಾಣೈ ಅಣೆಕಟ್ಟು ತಲುಪುವ ಸಾಧ್ಯತೆ ಇದೆ. ಹೀಗಾಗಿ ನೀರು ಪೋಲಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.