ಕರೂರು (ತಮಿಳುನಾಡು): ತಮಿಳುನಾಡಿನ ಮೇಲೆ ಕೇಂದ್ರ ಸರ್ಕಾರದ ದಬ್ಬಾಳಿಕೆ ಕುರಿತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬುಧವಾರ ವಾಗ್ದಾಳಿ ನಡೆಸಿದರು.
ದೇಶಕ್ಕೆ ರಾಜ್ಯಗಳೇ ಅಡಿಪಾಯ. ಒಕ್ಕೂಟ ಸರ್ಕಾರ ಇದನ್ನು ಒತ್ತಿ ಹೇಳುತ್ತದೆ ಎಂದು ಹೇಳಿದರು.
‘ತಮಿಳುನಾಡಿನ ಮೇಲೆ ಹಿಂದಿ ಹೇರಿಕೆ, ನೀಟ್‌ನಿಂದ ಹೊರಗುಳಿಯಲು ವಿನಾಯಿತಿ ನೀಡದಿರುವುದು, ರಾಜ್ಯಕ್ಕೆ ಶಿಕ್ಷಣ ನಿಧಿಯನ್ನು ಬಿಡುಗಡೆ ಮಾಡದಿರುವುದು, ಪುರಾತತ್ವ ಸಂಶೋಧನೆಗಳನ್ನು ಮರೆಮಾಚುವ ಕೆಲಸ ಬಿಜೆಪಿ ಮಾಡುತ್ತಿದೆ. ಹಾಗಾಗಿ, ತಮಿಳುನಾಡಿನಲ್ಲಿ ಬಿಜೆಪಿ ಪ್ರವೇಶವಿಲ್ಲ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.