ADVERTISEMENT

ಬಿಜೆಪಿ, ಜೆಡಿಯು ನಾಯಕರ ಸಭೆ: ಎಲ್‌ಜೆಪಿಗೆ ಗೇಟ್‌ ಪಾಸ್‌ ಸಾಧ್ಯತೆ?

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 10:47 IST
Last Updated 12 ಸೆಪ್ಟೆಂಬರ್ 2020, 10:47 IST
ನಿತೀಶ್‌ ಕುಮಾರ್, ಜೆ.ಪಿ. ನಡ್ಡಾ
ನಿತೀಶ್‌ ಕುಮಾರ್, ಜೆ.ಪಿ. ನಡ್ಡಾ   

ಪಟ್ನಾ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯ ಸ್ಥಾನ ಹಂಚಿಕೆ ಕುರಿತಂತೆ ಬಿಜೆಪಿಯ ಹಿರಿಯ ನಾಯಕರು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಮುಖ್ಯಸ್ಥ ಜೆಪಿ ನಡ್ಡಾ, ಬಿಹಾರ ಚುನಾವಣೆ ಉಸ್ತುವಾರಿ ಫಡ್ನವಿಸ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸೇರಿದಂತೆ ರಾಜ್ಯ ನಾಯಕರು ನಿತೀಶ್ ಕುಮಾರ್ ಅವರನ್ನ ಭೇಟಿ ಮಾಡಿ, ಚುನಾವಣೆ ಸೀಟು ಹಂಚಿಕೆ ಕುರಿತಂತೆ ಅನೌಪಚಾರಿಕ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಇತರೆ ಪಕ್ಷಗಳ ಜೊತೆ ಮೈತ್ರಿ ಮುಂದುವರೆಸಲು ಬಿಜೆಪಿ ನಿರಾಕರಿಸಿದ್ದು ಜೆಡಿಯು ಜೊತೆ ಮಾತ್ರ ಮೈತ್ರಿ ಮುಂದುವರೆಯಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ADVERTISEMENT

ಉಭಯ ಪಕ್ಷಗಳು ಸಮನಾಗಿ ಸೀಟು ಹೊಂದಾಣಿಕೆ ಮಾಡಿಕೊಳ್ಳಲಿವೆ ಎನ್ನಲಾಗಿದೆ. ಕೊರೊನಾ ಸಂಕಷ್ಟ ಹಾಗೂ ಪ್ರವಾಹ ಕುರಿತಾಗಿ ಉಭಯ ನಾಯಕರು ಚರ್ಚೆ ನಡೆಸಿದರು.

ಸಭೆಯಲ್ಲಿ ಬಹುತೇಕ ಎಲ್‌ಜೆಪಿಯೊಂದಿಗೆ ಮೈತ್ರಿ ಕಡಿದುಕೊಳ್ಳುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಇದಕ್ಕೆ ನಿತೀಶ್‌ ಕುಮಾರ್‌ ಕೂಡ ಸಮ್ಮತಿ ನೀಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.