ADVERTISEMENT

ಕೋವಿಡ್ : ದೆಹಲಿ ಆಜಾದ್‌‌ಪುರ ಲಾಕ್‌‌ಡೌನ್ ನಿರ್ಬಂಧ ಸಡಿಲಿಕೆ, ಟ್ರಾಫಿಕ್ ಜಾಮ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 1:24 IST
Last Updated 22 ಏಪ್ರಿಲ್ 2020, 1:24 IST
ದೆಹಲಿ ಅಜಾದ್ ಪುರ ಮಾರುಕಟ್ಟೆಯಲ್ಲಿ ವಾಹನ ಸಂಚಾರ ದಟ್ಟಣೆ
ದೆಹಲಿ ಅಜಾದ್ ಪುರ ಮಾರುಕಟ್ಟೆಯಲ್ಲಿ ವಾಹನ ಸಂಚಾರ ದಟ್ಟಣೆ    

ದೆಹಲಿ: ಮಂಗಳವಾರದಿಂದ ಲಾಕ್‌‌ಡೌನ್ ನಿರ್ಬಂಧಸಡಿಲಿಕೆ ಜಾರಿ ಮಾಡಿದ ಕಾರಣ ಇಲ್ಲಿನ ಅಜಾದ್‌‌ಪುರ ಸಬ್ಜಿ ಮಂಡಿಯಲ್ಲಿ ವಾಹನ ದಟ್ಟಣೆಯಲ್ಲಿ ಹೆಚ್ಚಳ ಕಂಡು ಬಂ‌‌ತು.

24ಗಂಟೆಗಳ ಸಡಿಲಿಕೆ ಮಾಡಿದ ಪರಿಣಾಮತರಕಾರಿ ಕೊಳ್ಳುವವರು, ಮಾರುವವರು ವಾಹನಗಳಲ್ಲಿ ಬಂದುವಾಹನಗಳ ಓಡಾಟ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವುದನ್ನು ಲೆಕ್ಕಿಸದೆ ಜನರುಗುಂಪಾಗಿ ಗುಂಪಾಗಿ ಹಣ್ಣು ತರಕಾರಿ ಇನ್ನಿತರೆ ಸಾಮಾನುಗಳನ್ನು ಖರೀದಿಸುವುದರಲ್ಲಿ ತೊಡಗಿದ್ದರು.

ಲಾರಿಗಳ ಸಂಚಾರಕ್ಕೆ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹಣ್ಣು ತರಕಾರಿಗಳನ್ನು ಖರೀದಿಸಲು,ಮಾರಾಟ ಮಾಡಲು ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಅವಕಾಶ ಕಲ್ಪಿಸಿ ದೆಹಲಿ ಸರ್ಕಾರ ಆದೇಶಿಸಿದೆ.ಈ ಕಾರಣದಿಂದಾಗಿ ಅಜಾದ್‌‌ಪುರ ಮಾರುಕಟ್ಟೆ ಸುತ್ತಮುತ್ತ ವಾಹನ ಸಂಚಾರ ಹೆಚ್ಚಾಗಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.