ADVERTISEMENT

ಮೊಬೈಲ್‌ ಫೋನ್‌ಗಳಲ್ಲಿ ಕರೆ ಮಾಡುವವರ ಗುರುತು: ಅಭಿಪ್ರಾಯ ಕೇಳಿದ ಟ್ರಾಯ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 15:39 IST
Last Updated 30 ನವೆಂಬರ್ 2022, 15:39 IST

ನವದೆಹಲಿ: ಕರೆ ಮಾಡುತ್ತಿರುವವ ಗುರುತನ್ನು ಮೊಬೈಲ್‌ ಫೋನ್‌ಗಳ ಪ್ರದರ್ಶಿಸುವಂಥ ಸೌಲಭ್ಯವು ಎಲ್ಲಾ ಗ್ರಾಹಕರಿಗೂ ದೊರಕುವಂತಾಗಬೇಕು ಎಂದು ಹೇಳಿರುವ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಈ ಕುರಿತು ಅಭಿಪ್ರಾಯ ದಾಖಲಿಸುವಂತೆ ದೂರವಾಣಿ ಸಂಪರ್ಕ ಸಂಸ್ಥೆಗಳಿಗೆ ಹೇಳಿದೆ.

ಕರೆ ಮಾಡುವವರ ಹೆಸರು ಪ್ರದರ್ಶನ (ಸಿಎನ್‌ಎಪಿ) ಸೌಲಭ್ಯವನ್ನು ಎಲ್ಲಾ ಮೊಬೈಲ್‌ ಸಂಪರ್ಕ ಬಳಕೆದಾರರಿಗೆ ಒದಗಿಸುವ ಕುರಿತು ‘ದೂರಸಂಪರ್ಕ ವಿಭಾಗ’ವು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸೇವೆಯಿಂದಾಗಿ, ಕರೆಗಳನ್ನು ಸ್ವೀಕರಿಸುವ ಕುರಿತು ಗ್ರಾಹಕರು ಮೊದಲೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.ಅಪರಿಚಿತರ ಕರೆಗಳು ಮತ್ತು ಸ್ಪಾಮ್‌ ಕರೆಗಳಿಂದ ಗ್ರಾಹಕರು ಕಿರುಕುಳ ಅನುಭವಿಸುವುದೂ ಇದರಿಂದ ತಪ್ಪುತ್ತದೆ ಎಂದು ಟ್ರಾಯ್ ಹೇಳಿದೆ.

ಜೊತೆಗೆ, ಸಿಎನ್‌ಎಪಿ ಸೌಲಭ್ಯವನ್ನು ಒದಗಿಸಲುದೂರವಾಣಿ ಸಂಪರ್ಕ ಸಂಸ್ಥೆಗಳಿಗೆ ತಯಾರಿದ್ದಾವೆಯೇ ಎಂಬ ಕುರಿತು ಮಾಹಿತಿ ಪಡೆಯುವಂತೆಯೂ ದೂರಸಂಪರ್ಕ ವಿಭಾಗವು ಹೇಳಿದೆ.

ADVERTISEMENT

ಈಗಾಗಲೇ ಟ್ರೂಕಾಲರ್‌, ಭಾರತ್‌ ಕಾಲರ್‌ ಐಡಿ ಆ್ಯಂಡ್‌ ಸ್ಪಾಮ್‌ ಸಂಸ್ಥೆಗಳು ಈ ಸೇವೆ ನೀಡುತ್ತಿವೆ. ಆದರೆ ಸಮೂಹ ಮೂಲಗಳಿಂದ ಪಡೆದ ಈ ಮಾಹಿತಿಯನ್ನು ಸಂಪೂರ್ಣ ಅವಲಂಭಿಸಲು ಸಾಧ್ಯವಿಲ್ಲಎಂದು ಟ್ರಾಯ್‌ ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ 27ರ ಒಳಗೆ ಅಭಿಪ್ರಾಯ ನೀಡಲುಸಾರ್ವಜನಿಕರಿಗೆ ಟ್ರಾಯ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.