ADVERTISEMENT

ದೇಶದ ಸಾರಿಗೆ ಕ್ಷೇತ್ರದ ಮೇಲೆ ಸೈಬರ್‌ ದಾಳಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 19:35 IST
Last Updated 21 ಮಾರ್ಚ್ 2021, 19:35 IST
ಪ್ರಾತಿನಿಧಿಕ ಸುದ್ದಿ
ಪ್ರಾತಿನಿಧಿಕ ಸುದ್ದಿ   

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದಡಿ ಬರುವ ವಿವಿಧ ಇಲಾಖೆಗಳು, ರಾಜ್ಯಗಳ ಲೋಕೋಪಯೋಗಿ ಇಲಾಖೆಗಳ ಮೇಲೆ ಸೈಬರ್‌ ದಾಳಿ ನಡೆಯುವ ಸಾಧ್ಯತೆ ಕುರಿತು ಎಚ್ಚರಿಕೆ ನೀಡಿರುವ ಸಚಿವಾಲಯ, ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾನುವಾರ ಸೂಚಿಸಿದೆ.

‘ದೇಶದ ಸಾರಿಗೆ ಕ್ಷೇತ್ರದ ಚಟುವಟಿಕೆಗಳಿಗೆ ಅಡಚಣೆ ಉಂಟು ಮಾಡುವ ದುರುದ್ದೇಶದಿಂದ ಸೈಬರ್‌ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಸಿಇಆರ್‌ಟಿ–ಇನ್‌ ಎಚ್ಚರಿಕೆ ನೀಡಿದೆ’ ಎಂದು ಸಚಿವಾಲಯ ಹೇಳಿದೆ.

‘ಎನ್‌ಐಸಿ, ಎನ್‌ಎಚ್‌ಎಐ, ಎನ್‌ಎಚ್‌ಐಡಿಸಿಎಲ್‌, ಐಆರ್‌ಸಿ, ಐಎಎಚ್‌ಇ, ರಾಜ್ಯಗಳ ಪಿಡಬ್ಲ್ಯುಡಿಗಳು, ಟೆಸ್ಟಿಂಗ್‌ ಏಜೆನ್ಸಿಗಳು ಹಾಗೂ ಆಟೊಮೊಬೈಲ್‌ ಉತ್ಪಾದಕರು ತಮ್ಮ ಸಂಸ್ಥೆಗಳಲ್ಲಿನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಸುರಕ್ಷತೆ ಕುರಿತು ಆಡಿಟ್‌ ಕೈಗೊಳ್ಳಬೇಕು. ಸಿಇಆರ್‌ಟಿ–ಇನ್‌ ಪ್ರಮಾಣಿತ ಸಂಸ್ಥೆಗಳಿಂದ ಈ ಆಡಿಟ್‌ ನಡೆಸಬೇಕು’ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಸೈಬರ್‌ ಸುರಕ್ಷತೆಯ ನೋಡಲ್‌ ಏಜೆನ್ಸಿಯಾಗಿರುವ ಸಿಇಆರ್‌ಟಿ–ಇನ್‌, ಸಂಭಾವ್ಯ ಸೈಬರ್‌ ದಾಳಿ ಕುರಿತು ಎಲ್ಲ ಇಲಾಖೆಗಳಿಗೆ ಸೂಚನೆ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.