
ನವದೆಹಲಿ: ವಿಚಾರಣಾ ನ್ಯಾಯಾಲಯವು ಒಬ್ಬ ವ್ಯಕ್ತಿಯ ಸ್ವಾಭಾವಿಕ ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಅಹಸಾನುದ್ದೀನ್ ಅಮಾನುಲ್ಲಾಹ್ ಮತ್ತು ಕೆ.ವಿನೋದ್ ಚಂದ್ರನ್ ನೇತೃತ್ವದ ನ್ಯಾಯಪೀಠವು, ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ. ಸೆಷನ್ಸ್ ಕೋರ್ಟ್‌ಗಳಿಗೆ ಅಂಥ ಅಧಿಕಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಲೈಂಗಿಕವಾಗಿ ಸಹಕರಿಸದ ವಿಧವೆಯೊಬ್ಬರಿಗೆ ಬೆಂಕಿ ಇಟ್ಟ ಪ್ರಕರಣದ ಅಪರಾಧಿ ಕಿರಣ್ ಮನವಿಯನ್ನು ನ್ಯಾಯಾಲಯವು ಭಾಗಶಃ ಪರಿಗಣಿಸಿತು. ಘಟನೆ ನಡೆದ 10 ದಿನಗಳ ನಂತರ ಸಂತ್ರಸ್ತೆಯು ಮೃತಪಟ್ಟಿದ್ದರು.
ತಪ್ಪಿತಸ್ಥನಿಗೆ ವಿಚಾರಣಾ ನ್ಯಾಯಾಲಯವು ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು ಮತ್ತು ಸೆಕ್ಷನ್ 428ರ ಅಡಿಯಲ್ಲಿ ಕ್ಷಮೆಯನ್ನೂ ಪಡೆಯುವಂತಿಲ್ಲ ಎಂದು ಸೂಚಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು, ತಪ್ಪಿತಸ್ಥ ಎಂಬ ತೀರ್ಪನ್ನು ಎತ್ತಿಹಿಡಿಯಿತು ಮತ್ತು 14 ವರ್ಷಗಳ ಜೀವಾವಧಿ ಶಿಕ್ಷೆಯಾಗಿ ಪರಿಷ್ಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.