ADVERTISEMENT

ಆಹಾರ ಪದಾರ್ಥ ಕದ್ದಿದ್ದಕ್ಕೆ ಬುಡಕಟ್ಟು ವ್ಯಕ್ತಿಯ ಹತ್ಯೆ: 13 ಮಂದಿಗೆ 7 ವರ್ಷ ಸಜೆ

ಪಿಟಿಐ
Published 5 ಏಪ್ರಿಲ್ 2023, 11:22 IST
Last Updated 5 ಏಪ್ರಿಲ್ 2023, 11:22 IST
   

ಪಾಲಕ್ಕಾಡ್ : ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಅಗಳಿ ಎಂಬಲ್ಲಿ ಅಂಗಡಿಯೊಂದರಿಂದ ಆಹಾರ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಥಳಿಸಿ, ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯವು ಬುಧವಾರ 13 ಮಂದಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅಟ್ಟಪ್ಪಡಿಯ ಮಧು ಎಂಬುವವರನ್ನು ಗುಂಪೊಂದು 2018ರ ಫೆ.22ರಂದು ಥಳಿಸಿ ಕೊಂದು ಹಾಕಿತ್ತು. ಐದು ವರ್ಷಗಳ ತನಿಖೆಯ ಬಳಿಕ ಮಂಗಳವಾರ ತೀರ್ಪು ನೀಡಿದ್ದ ನ್ಯಾಯಾಧೀಶ ಕೆ.ಎಂ. ರತೀಶ್‌ ಕುಮಾರ್‌ ಅವರು, ಈ 13 ಜನರು ದೋಷಿಗಳು ಎಂದು ಘೋಷಿಸಿದ್ದರು. ಅವರಿಗೆ ಇದೀಗ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ.

‘ಶಿಕ್ಷೆಯ ಪ್ರಮಾಣ 7 ವರ್ಷ ಆಗಿರುವುದಕ್ಕೆ ಬೇಸರವಿದೆ. ಅಪರಾಧಿಗಳು ಜೀವಾವಧಿ ಶಿಕ್ಷೆಗೆ ಅರ್ಹರಾಗಿದ್ದಾರೆ. ರಾಜ್ಯ ಸರ್ಕಾರ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಶ್ವಾಸ ಇದೆ ಎಂದು ವಿಶೇಷ ಸರ್ಕಾರಿ ವಕೀಲ ರಾಜೇಶ್‌ ಎಂ. ಮೆನನ್ ಹೇಳಿದರು. ಮಧು ಅವರ ಕುಟುಂಬ ಸದಸ್ಯರು ಸಹ ಶಿಕ್ಷೆಯ ಪ್ರಮಾಣದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.