ADVERTISEMENT

ತ್ರಿಪುರಾ: ಮಾಣಿಕ್ ಸಹಾ ಮತ್ತೆ ಮುಖ್ಯಮಂತ್ರಿ

ಪಿಟಿಐ
Published 6 ಮಾರ್ಚ್ 2023, 18:12 IST
Last Updated 6 ಮಾರ್ಚ್ 2023, 18:12 IST
ಮಾಣಿಕ್‌ ಸಹಾ
ಮಾಣಿಕ್‌ ಸಹಾ   

ಅಗರ್ತಲಾ: ಮಾಣಿಕ್‌ ಸಹಾ ಅವರು ಮತ್ತೊಂದು ಅವಧಿಗೆ ತ್ರಿಪುರಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸೋಮವಾರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಗಾದಿಗೆ ಸಹಾ ಹೆಸರು ಅಂತಿಮಗೊಳಿಸಲಾಗಿದೆ. ‘ಸಹಾ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ನೇಮಿಸುವ ಪ್ರಸ್ತಾವಕ್ಕೆ ಪಕ್ಷದ ಎಲ್ಲಾ ಶಾಸಕರು ಸರ್ವಾನುಮತದಿಂದ ಬೆಂಬಲ ಸೂಚಿಸಿ ದ್ದಾರೆ’ ಎಂದು ಬಿಜೆಪಿ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ಬಾರಿಯೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದ ಸಹಾ, ಈ ಬಾರಿ ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್ ಅವರಿಗೆ ಈ ಗಾದಿ ಬಿಟ್ಟುಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ADVERTISEMENT

ನೂತನ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು ಇದೇ 8ರಂದು ನಿಗದಿಯಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆ ಇದೆ.

ಕಾರ್ಯಕರ್ತರ ಮೇಲೆ ದಾಳಿ– ಸಿಪಿಎಂ ಆರೋಪ: ‘ತನ್ನ ಅಲ್ಪ ಅಂತರದ ಗೆಲುವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಬಿಜೆಪಿಯು ತ್ರಿಪುರಾದಲ್ಲಿ ಹಿಂಸೆ ನಡೆಸುತ್ತಿದೆ’ ಎಂದು ಸಿಪಿಎಂ ಸೋಮವಾರ ಆರೋಪಿಸಿದೆ.

‘ಪಕ್ಷದ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗುತ್ತಿದೆ. ಜೊತೆಗೆ ಅವರ ಮನೆ ಹಾಗೂ ಆಸ್ತಿಗಳ ಮೇಲೂ ದಾಳಿ ನಡೆಯುತ್ತಿದೆ’ ಎಂದು ಸಿಪಿಎಂ ಹೇಳಿದೆ.

‘ಶೆಪಿಹಿಜಲಾ ಹಾಗೂ ಖೋವಾಯಿ ಜಿಲ್ಲೆಗಳಲ್ಲಿ ಚುನಾವಣೋತ್ತರ ಹಿಂಸೆ ಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ. ಈ ಹಿಂಸೆಗಳಲ್ಲಿ ಇಲ್ಲಿಯ ವರೆಗೆ ಎಂಟು ಮಂದಿ ಗಾಯಗೊಂಡಿದ್ದಾರೆ ಹಾಗೂ 20 ಮಂದಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.