ADVERTISEMENT

ಫೆ.21ಕ್ಕೆ ಟ್ರಂಪ್ ಭಾರತ ಭೇಟಿ ಸಾಧ್ಯತೆ: ಭಾರತಕ್ಕಿದು ಮಹತ್ವದ ಬೆಳವಣಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2020, 2:23 IST
Last Updated 28 ಜನವರಿ 2020, 2:23 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್   

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆಬ್ರುವರಿ 21ರಿಂದ 24ರವರೆಗೆ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ವಿಶ್ವಸಂಸ್ಥೆಯಲ್ಲಿ ಚರ್ಚೆಗೆ ಬರಲಿರುವ ವಿಷಯಗಳು, ರಕ್ಷಣಾ ಒಪ್ಪಂದ ಸೇರಿ ಹಲವು ಮಹತ್ವದ ಸಂಗತಿಗಳುಈ ಸಂದರ್ಭ ಎರಡೂ ದೇಶಗಳ ನಡುವೆ ಚರ್ಚೆಯಾಗುವ ಸಾಧ್ಯತೆ ಇದೆ.

ಫೆಬ್ರುವರಿ 24ರಿಂದ ಮಾರ್ಚ್‌ 30ರವರೆಗೆ ಜಿನಿವಾದಲ್ಲಿ ನಡೆಯಲಿರುವವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಭಾರತದ ವಿರುದ್ಧ ಹರಿಹಾಯಲು ಪಾಕಿಸ್ತಾನ ಸಿದ್ಧತೆ ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಭೇಟಿಗೆ ಮಹತ್ವದ ಬಂದಿದೆ.

ಭಾರತ ಭೇಟಿ ವೇಳೆಅಹಮದಾಬಾದ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಡನೆ ಟ್ರಂಪ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ಆದರೆ ಕಾರ್ಯಕ್ರಮ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

ದೆಹಲಿಯ ಐಟಿಸಿ ಮಯೂರ ಹೊಟೆಲ್‌ನಲ್ಲಿ ಟ್ರಂಪ್ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಮೆರಿಕದ ಹಿಂದಿನ ಅಧ್ಯಕ್ಷರಾದ ಬರಾಕ್ ಒಬಾಮಾ ಮತ್ತು ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತ ಭೇಟಿ ವೇಳೆ ಇದೇ ಹೋಟೆಲ್‌ನಲ್ಲಿ ತಂಗಿದ್ದರು.

ಭಾರತ ಭೇಟಿ ವೇಳೆ ಟ್ರಂಪ್ ಅವರು ಅಫ್ಗಾನಿಸ್ತಾನ ಕುರಿತ ತಮ್ಮ ನಿಲುವು ಸ್ಪಷ್ಟಪಡಿಸುವ ಸಾಧ್ಯತೆ ಇದೆ. ಅಮೆರಿಕದಿಂದ ಭಾರತವು ತನ್ನ ನೌಕಾಪಡೆಗೆ ಅಪಾಚೆ ದಾಳಿ ಹೆಲಿಕಾಪ್ಟರ್‌ ಖರೀದಿಗೆ ಉತ್ಸುಕವಾಗಿದೆ. ಇದರ ಜೊತೆಗೆ ವೈವಿಧ್ಯಮಯ ಕಾರ್ಯನಿರ್ವಹಣೆಯಪಿ81 ವಿಮಾನ ಖರೀದಿ, ಪ್ರಿಡೇಟರ್ ಬಿ ಶಸ್ತ್ರಸಜ್ಜಿತ ಡ್ರೋಣ್ ಖರೀದಿ ಇಚ್ಛೆಯೂ ಭಾರತಕ್ಕೆ ಇದೆ. ಟ್ರಂಪ್ ಭೇಟಿಯ ವೇಳೆ ಅಮೆರಿಕದ ರಕ್ಷಣಾ ಗುತ್ತಿಗೆದಾರರ ಜೊತೆಗೆ ಈ ಸಂಬಂಧ ಮಾತುಕತೆ ನಡೆಯಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ.

ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಪಾಕಿಸ್ತಾನವು ಭಾರತಈಚೆಗೆ ತೆಗೆದುಕೊಂಡ ಹಲವು ಕ್ರಮಗಳನ್ನು ಪ್ರಸ್ತಾಪಿಸಬಹುದು ಎನ್ನಲಾಗಿದೆ. ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದತಿ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಭಾರತದಲ್ಲಿ ಮುಸ್ಲಿಮರಿಗೆ ರಕ್ಷಣೆಯಿಲ್ಲ ಎಂದು ಪಾಕಿಸ್ತಾನ ವಿಶ್ವದ ಎದುರುಬಿಂಬಿಸುವ ಸಾಧ್ಯತೆ ಇದೆ ಎಂದು ಉನ್ನತ ಅಧಿಕಾರಿಗಳ ಅಭಿಪ್ರಾಯ ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.