ಶ್ರೀನಗರ: ಮುಂದಿನ ವರ್ಷದ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಾಮ ನಿರ್ದೇಶನ ಮಾಡಿರುವ ಪಾಕಿಸ್ತಾನದ ಧೋರಣೆಗೆ ಕಾಶ್ಮೀರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಟ್ರಂಪ್ ಇರಾನ್ ಮೇಲೆ ದಾಳಿ ನಡೆಸಿದ್ದಾರೆ, ಅಂಥವರನ್ನು ನೊಬೆಲ್‌ಗೆ ಪರಿಗಣಿಸುವಂತೆ ಪಾಕಿಸ್ತಾನ ನಾಮ ನಿರ್ದೇಶಿಸಿರುವುದು ಸರಿಯಲ್ಲ’ ಎಂಬುದು ಕಾಶ್ಮೀರದ ಬಹುತೇಕ ಯುವ ಜನರ ಅಭಿಪ್ರಾಯವಾಗಿದೆ. ಈ ಕಾರಣಕ್ಕಾಗಿಯೇ ಇಲ್ಲಿನ ಯುವ ಜನರಲ್ಲಿ ಪಾಕ್ ವಿರುದ್ಧ ಅಸಮಧಾನ ಹೆಚ್ಚುತ್ತಿದೆ.
‘ಟ್ರಂಪ್ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅವರು ಇಸ್ರೇಲ್ ಅನ್ನು ಬೆಂಬಲಿಸಿ, ಇರಾನ್ ಮೇಲೆ ದಾಳಿ ಮಾಡಿದ್ದಾರೆ. ಇಂಥವರನ್ನು ಗೌರವಿಸಲು ಪಾಕಿಸ್ತಾನ ಬಯಸುತ್ತದೆಯೇ?’ ಎಂದು ಕಾಶ್ಮೀರದ ವಿದ್ಯಾರ್ಥಿ ಮೆಹ್ರನ್ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ. ‘ಟ್ರಂಪ್‌ನ ಚಿಯರ್ ಲೀಡರ್‌ಗಳ ಜತೆಗೆ ಕಾಶ್ಮೀರ ಇಲ್ಲ, ಬದಲಿಗೆ ಇರಾನ್ ಜತೆಗಿದ್ದೇವೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಮೂಲಕ ಕಾಶ್ಮೀರದ ಯುವ ಜನರು ಪಾಕಿಸ್ತಾನದ ವಿದೇಶಾಂಗ ನೀತಿಯನ್ನು ಅನುಮಾನದಿಂದ ನೋಡಲಾರಂಭಿಸಿದ್ದಾರೆ. ಪಾಕ್ ವಿದೇಶಾಂಗ ನೀತಿಯು ವ್ಯವಹಾರ ಮತ್ತು ಅವಕಾಶವಾದಿತನದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮಗಳ ಜಾಲತಾಣಗಳಲ್ಲಿ ಪಾಕ್ ವಿರೋಧಿ ಪೋಸ್ಟ್‌ಗಳನ್ನು ಹಾಕುವ ಮತ್ತು ಹಂಚಿಕೊಳ್ಳುವ ಮೂಲಕ ಕಾಶ್ಮೀರದ ವಿದ್ಯಾರ್ಥಿಗಳು ಮತ್ತು ಯುವ ಜನರು ಆಕ್ರೋಶ ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.