ನವದೆಹಲಿ: ‘ಸತ್ಯವನ್ನು ತಿರುಚಬಹುದು ಆದರೆ ಸೋಲಿಸಲಾಗದು’ ಎಂದು ರಾಜಸ್ಥಾನದ ಉಪಮುಖ್ಯಮಂತ್ರಿ ಹುದ್ದೆ ಹಾಗೂ ಕಾಂಗ್ರೆಸ್ ಅಧ್ಯಕ್ಷಸ್ಥಾನದಿಂದ ಉಚ್ಚಾಟನೆಗೊಂಡಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಟ್ವೀಟ್ ಮಾಡಿದ್ದಾರೆ.
ಈ ಹುದ್ದೆಗಳಿಂದ ಉಚ್ಚಾನೆಗೊಳ್ಳುತ್ತಿದ್ದಂತೆಯೇ ಸಚಿನ್ ಅವರು ತಮ್ಮ ಟ್ವಿಟರ್ ಖಾತೆಯಿಂದ, ತಾನು ಹಿಂದೆ ನಿರ್ವಹಿಸಿದ್ದ ಹುದ್ದೆಗಳನ್ನು ಕುರಿತ ಎಲ್ಲಾ ಮಾಹಿತಿಯನ್ನೂ ತೆಗೆದುಹಾಕಿದ್ದಾರೆ. ಬದಲಿಗೆ, ‘ಶಾಸಕ ಮತ್ತು ಮಾಹಿತಿ ತಂತ್ರಜ್ಞಾನ, ಟೆಲಿಕಾಂ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಮಾಜಿ ಸಚಿವ’ ಎಂಬ ಮಾಹಿತಿಯನ್ನು ಮಾತ್ರ ಉಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.