ADVERTISEMENT

ಗೂಗಲ್‌ ವಿರುದ್ಧ ದಾವೆ

ಪಿಟಿಐ
Published 26 ಜುಲೈ 2019, 19:51 IST
Last Updated 26 ಜುಲೈ 2019, 19:51 IST
ತುಳಸಿ ಗಬ್ಬಾರ್ಡ್‌
ತುಳಸಿ ಗಬ್ಬಾರ್ಡ್‌   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ, ಡೆಮಾಕ್ರಟಿಕ್‌ ಪಕ್ಷದ ತುಳಸಿ ಗಬ್ಬಾರ್ಡ್‌ ಅವರು ₹ 344 ಕೋಟಿ (5 ಕೋಟಿ ಡಾಲರ್‌) ಪರಿಹಾರ ಕೋರಿ ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಗೂಗಲ್‌ ವಿರುದ್ದ ದಾವೆ ಹೂಡಿದ್ದಾರೆ.

‘ಮುಂದಿನ ವರ್ಷ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ನಾನು ಕೈಗೊಂಡ ಪ್ರಚಾರದ ಪ್ರಸಾರಕ್ಕೆ ಸಂಬಂ
ಧಿಸಿ ಗೂಗಲ್ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಹಾಗೂ ನನ್ನ ವಾಕ್‌ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ’ ಎಂದು ತುಳಸಿ ಆರೋಪಿಸಿದ್ದಾರೆ.

‘ಚುನಾವಣಾ ಪ್ರಚಾರ ಕಾರ್ಯ ಪ್ರಸಾರ ಮಾಡಲು ನಾನು ಗೂಗಲ್‌ನಲ್ಲಿ ಜಾಹೀರಾತು ಖಾತೆಯನ್ನು ಹೊಂದಿದ್ದೇನೆ. ಜೂನ್‌ನಲ್ಲಿ ನನ್ನ ಮೊದಲ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಪ್ರಸಾರವನ್ನು ಸಂಸ್ಥೆ ಕೆಲಕಾಲ ಸ್ಥಗಿತಗೊಳಿಸಿತು. ಇದರಿಂದ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಿದಂತಾಗಿದೆ’ ಎಂದು ಲಾಸ್‌ ಏಂಜಲೀಸ್‌ನ ಕೋರ್ಟ್‌ನಲ್ಲಿ ದಾಖಲಿಸಿರುವ ಮೊಕದ್ದಮೆಯಲ್ಲಿ ಅವರು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.