ADVERTISEMENT

ಲೆಫ್ಟಿನೆಂಟ್ ಗವರ್ನರ್‌ ಸಿನ್ಹಾ ವಿರುದ್ಧ ತುಷಾರ್‌ ಗಾಂಧಿ ಕಿಡಿ

ಪಿಟಿಐ
Published 25 ಮಾರ್ಚ್ 2023, 14:44 IST
Last Updated 25 ಮಾರ್ಚ್ 2023, 14:44 IST
ತುಷಾರ್ ಗಾಂಧಿ 
ತುಷಾರ್ ಗಾಂಧಿ    

ಮುಂಬೈ: ‘ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಯಾವ ವಿಶ್ವವಿದ್ಯಾಲಯದಿಂದಲೂ ಪದವಿ ಪಡೆದಿಲ್ಲ’ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ನೀಡಿದ್ದ ಹೇಳಿಕೆಯನ್ನು ಗಾಂಧೀಜಿ ಮರಿ ಮೊಮ್ಮಗ ತುಷಾರ್‌ ಗಾಂಧಿ ಖಂಡಿಸಿದ್ದಾರೆ.

‘ಗಾಂಧೀಜಿ ರಾಜ್‌ಕೋಟ್‌ನ ಆಲ್ಫ್ರೆಡ್‌ ಪ್ರೌಢಶಾಲೆಯಲ್ಲಿ ಮೆಟ್ರಿಕ್ ಪೂರ್ಣಗೊಳಿಸಿದ್ದಾರೆ. ಲಂಡನ್‌ನಲ್ಲಿ ಬ್ರಿಟಿಷ್‌ ಮೆಟ್ರಿಕ್ಯುಲೇಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಲಂಡನ್‌ ವಿಶ್ವವಿದ್ಯಾಲಯದ ಮಾನ್ಯತೆ ಹೊಂದಿರುವ ಇನ್ನರ್‌ ಟೆಂಪಲ್‌ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ನಡೆಸಿ ಪದವಿಯನ್ನೂ ಪಡೆದಿದ್ದಾರೆ. ಲ್ಯಾಟಿನ್‌ ಹಾಗೂ ಫ್ರೆಂಚ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ’ ಎಂದು ತುಷಾರ್‌ ಟ್ವೀಟ್‌ ಮಾಡಿದ್ದಾರೆ.

ಗ್ವಾಲಿಯರ್‌ನ ಐಟಿಎಂ ವಿಶ್ವವಿದ್ಯಾಲಯವು ಗುರುವಾರ ಆಯೋಜಿಸಿದ್ದ ಡಾ.ರಾಮ್‌ ಮನೋಹರ್‌ ಲೋಹಿಯಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿನ್ಹಾ, ‘ಗಾಂಧಿ ಅವರು ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ ಎಂದು ನಾವೆಲ್ಲಾ ಭಾವಿಸಿದ್ದೇವೆ. ಅದು ಸುಳ್ಳು. ಅವರು ವಕೀಲಿಕೆಗೆ ಅರ್ಹತೆ ಪಡೆದಿದ್ದರೆ ವಿನಃ ಯಾವ ವಿಶ್ವವಿದ್ಯಾಲಯದಿಂದಲೂ ಪದವಿ ಗಳಿಸಿರಲಿಲ್ಲ. ಪ್ರೌಢಶಾಲಾ ಡಿಪ್ಲೊಮಾ ಪೂರ್ಣಗೊಳಿಸಿರುವುದಷ್ಟೇ ಅವರ ವಿದ್ಯಾರ್ಹತೆ’ ಎಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.