ADVERTISEMENT

ಅತ್ಯಾಚಾರಗಳಿಗೆ ಟೆಲಿವಿಷನ್‌, ಮೊಬೈಲ್‌ ಕಾರಣ: ಕಾಂಗ್ರೆಸ್‌ ಸಚಿವರು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 8:37 IST
Last Updated 6 ಡಿಸೆಂಬರ್ 2019, 8:37 IST
ಬನ್ವರ್ಲಾಲ್ ಮೇಘವಾಲ
ಬನ್ವರ್ಲಾಲ್ ಮೇಘವಾಲ   

ಜೈಪುರ: ‘ಟೆಲಿವಿಷನ್‌ ಮತ್ತು ಮೊಬೈಲ್‌ ಬರುವುದಕ್ಕೂ ಮುಂಚೆ ಯಾವುದೇ ಅತ್ಯಾಚಾರ ನಡೆದಿಲ್ಲ’ ಎಂದು ರಾಜಸ್ಥಾನ ಕಾಂಗ್ರೆಸ್‌ ಸಚಿವ ಬನ್ವರ್ಲಾಲ್ ಮೇಘವಾಲ ಗುರುವಾರ ಹೇಳಿದ್ದಾರೆ.

ಹೆಚ್ಚುತ್ತಿರುವ ಅಪರಾಧಗಳ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಟೆಲಿವಿಷನ್‌ ಮತ್ತು ಅಂತರ್ಜಾಲದಲ್ಲಿ ಬರುವ ಎಲ್ಲಾ ವಿಷಯಗಳನ್ನು ಗಮನಿಸುವ ಈಗಿನ ಯುವಜನತೆ ತಪ್ಪುದಾರಿಯತ್ತಾ ಸಾಗುತ್ತಿದ್ದಾರೆ. ಅದಕ್ಕಾಗಿಯೇ ಅಪರಾಧಗಳ ಸಂಖ್ಯೆ ಹೆಚ್ಚಾಗಿವೆ. ಟೆಲಿವಿಷನ್‌, ಮೊಬೈಲ್ ಬರುವುದಕ್ಕೂಮುಂಚೆ ಅಪರೂಪಕ್ಕೊಂದು ಅಪರಾಧಗಳು ನಡೆಯುತ್ತಿದ್ದವು’ ಎಂದು ತಿಳಿಸಿದ್ದಾರೆ.

‘ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೆ ಸಾರ್ವಜನಿಕವಾಗಿ ಶಿಕ್ಷಿಸಬೇಕು ಮತ್ತು ಕೋರ್ಟ್‌ ಇಂತಹ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ನಡೆಸಿ, ತೀರ್ಪು ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರಾಜಸ್ಥಾನ ಸಂಪುಟ ಸಚಿವ ಬಿ.ಡಿ. ಕಲ್ಲಾ ಅವರು ‘ಅಂತರ್ಜಾಲ ಮತ್ತು ಮೊಬೈಲ್‌ ಬಳಕೆಯಿಂದ ಅತ್ಯಾಚಾರ, ಕೊಲೆ ಹೆಚ್ಚಾಗಿದೆ’ ಎಂದು ಹೇಳಿಕೆ ನೀಡಿದ ಮೂರು ದಿನಗಳ ನಂತರ ಬನ್ವರ್ಲಾಲ್ ಅದೇ ಮಾತುಗಳನ್ನಾಡಿದ್ದಾರೆ.‌

ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ 6 ವರ್ಷದ ಬಾಲಕಿಯನ್ನು ಅತ್ಯಾಚಾರ, ಕೊಲೆ ಪ್ರಕರಣದ ಕುರಿತು ಈ ಇಬ್ಬರು ಮುಖಂಡರು ಪ್ರತಿಕ್ರಿಯೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.