ADVERTISEMENT

ಕಾಪಿರೈಟ್ ವರದಿ: ಅಮಿತ್ ಶಾ ಖಾತೆಯಿಂದ ಪ್ರೊಫೈಲ್‌ ಚಿತ್ರ ತೆಗೆದುಹಾಕಿದ ಟ್ವಿಟರ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 2:22 IST
Last Updated 13 ನವೆಂಬರ್ 2020, 2:22 IST
ಕೇಂದ್ರ ಗೃಹಸಚಿವ ಅಮಿತ್‌ ಶಾ
ಕೇಂದ್ರ ಗೃಹಸಚಿವ ಅಮಿತ್‌ ಶಾ    

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಾಕಿದ್ದ ಪ್ರೊಫೈಲ್‌ ಚಿತ್ರವನ್ನು ಕಾಪಿರೈಟ್‌ ವರದಿಯ ಕಾರಣದಿಂದಾಗಿ ಟ್ವಿಟರ್‌ ತೆಗೆದುಹಾಕಿದೆ. ಕೆಲ ಸಮಯದ ಬಳಿಕ ಬೇರೊಂದು ಚಿತ್ರವನ್ನು ಹಾಕಲಾಗಿದೆ.

ಶಾ ಅವರ ಅಧಿಕೃತ ಖಾತೆಯಲ್ಲಿ ಪ್ರೊಫೈಲ್‌ ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ, ‘ಮಾಧ್ಯಮವನ್ನು ಪ್ರದರ್ಶಿಸಲಾಗದು. ಕಾಪಿರೈಟ್‌ (ಕೃತಿಸ್ವಾಮ್ಯ) ಹೊಂದಿರುವವರ ವರದಿಗೆ ಪ್ರತಿಕ್ರಿಯೆಯಾಗಿ ಈ ಚಿತ್ರವನ್ನು ತೆಗೆದುಹಾಕಲಾಗಿದೆ’ ಎಂದು ಪ್ರದರ್ಶನವಾಗುತ್ತಿತ್ತು. ಸದ್ಯ ಚಿತ್ರ ಬದಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದೇ ರೀತಿಯ ಸಮಸ್ಯೆಯಿಂದಾಗಿ ಬಿಸಿಸಿಐ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನ ಪ್ರೊಫೈಲ್‌ ಚಿತ್ರವನ್ನೂ ಇತ್ತೀಚೆಗೆ ತೆಗೆದುಹಾಕಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.