ಚಂಡಿಗಡ: ಪಾಕಿಸ್ತಾನದ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಸೈನಿಕರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್‌ನಲ್ಲಿ ನೇಮಕಗೊಂಡಿದ್ದ ಹರ್ಪ್ರೀತ್ ಸಿಂಗ್ (23) ಮತ್ತು ಕಾರ್ಗಿಲ್‌ನಲ್ಲಿ ಗುಮಾಸ್ತರಾಗಿದ್ದ ಗುರ್ಬೇಜ್ ಸಿಂಗ್ (23) ಗೂಢಾಚಾರ್ಯೆಯಲ್ಲಿ ತೊಡಗಿದ್ದವರು. ಈ ಇಬ್ಬರೂ ಈಗಾಗಲೇ ದೇಶದ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ 900ಕ್ಕೂ ಹೆಚ್ಚು ದಾಖಲೆಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಂದು ಪಂಜಾಬ್‌ನ ಪೊಲೀಸ್ ಮಹಾ ನಿರ್ದೇಶಕ ರಣವೀರ್ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.