ADVERTISEMENT

ಗುಜರಾತ್‌ ಗಿಫ್ಟ್‌ ಸಿಟಿಯಲ್ಲಿ ಆಸ್ಟ್ರೇಲಿಯಾ ವಿ.ವಿಗಳಿಂದ ಕ್ಯಾಂಪಸ್‌: ಪ್ರಧಾನ್‌

ಪಿಟಿಐ
Published 1 ಮಾರ್ಚ್ 2023, 13:46 IST
Last Updated 1 ಮಾರ್ಚ್ 2023, 13:46 IST
.
.   

ನವದೆಹಲಿ: ಆಸ್ಟ್ರೇಲಿಯಾದ ವೊಲ್ಲೊಂಗಾಂಗ್‌ ಮತ್ತು ದೇಕಿನ್‌ ವಿಶ್ವವಿದ್ಯಾಲಯಗಳು ಗುಜರಾತ್‌ನ ಅಂತರರಾಷ್ಟ್ರೀಯ ಆರ್ಥಿಕ ತಾಂತ್ರಿಕ ನಗರದಲ್ಲಿ (ಗಿಫ್ಟ್‌ ಸಿಟಿ) ಕ್ಯಾಂಪಸ್‌ ತೆರೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಬುಧವಾರ ಘೋಷಿಸಿದರು.

ಆಸ್ಟ್ರೇಲಿಯಾ ಶಿಕ್ಷಣ ಸಚಿವ ಜಾಸನ್‌ ಕ್ಲೇರ್‌ ಅವರು ಭಾರತಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ದೆಹಲಿ ವಿಶ್ವವಿದ್ಯಾಲಯದ ವೆಂಕಟೇಶ್ವರ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ವೇಳೆ ಪ್ರಧಾನ್‌ ಅವರು ಈ ಘೋಷಣೆ ಮಾಡಿದರು.

‘ಮುಂದಿನ ವಾರ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಎರಡೂ ವಿಶ್ವವಿದ್ಯಾಲಯಗಳು ಒಪ್ಪಂದಕ್ಕೆ ಸಹಿ ಹಾಕಲಿವೆ. ಯುವ ಜನತೆಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್‌ಕ್ರಿಸ್ಟ್‌ ಅವರು ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಸಹಾಯ ಮಾಡಲಿದ್ದಾರೆ ಎಂದು ಸಚಿವ ಕ್ಲೇರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.