ADVERTISEMENT

ಮಧ್ಯಪ್ರದೇಶ: ವಾಹನ ಬಾವಿಗೆ ಬಿದ್ದು ಇಬ್ಬರು ಪೊಲೀಸರ ಸಾವು

ಪಿಟಿಐ
Published 27 ಫೆಬ್ರುವರಿ 2021, 9:51 IST
Last Updated 27 ಫೆಬ್ರುವರಿ 2021, 9:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಿಯೋನಿ (ಮಧ್ಯಪ್ರದೇಶ): ವಾಹನವು ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆದು ಬಾವಿಗೆ ಬಿದ್ದ ಪರಿಣಾಮ ಇಬ್ಬರು ಪೊಲೀಸರು ಮೃತಪಟ್ಟ ಘಟನೆ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ.

‘ಪೌಡಿ ಗ್ರಾಮದ ಕಲಾರ್‌ಬಂಕಿ–ಬಂಡೋಲ್‌ ರಸ್ತೆ ಬಳಿ ಶುಕ್ರವಾರ ಮಧ್ಯರಾತ್ರಿ ಅಪಘಾತ ಸಂಭವಿಸಿದೆ’ ಎಂದು ಬಂಡೋಲ್ ಪೊಲೀಸ್‌ ಠಾಣೆಯ ಅಧಿಕಾರಿ ಹೇಳಿದರು.

‘ಇನ್‌ಸ್ಪೆಕರ್‌ ನಿಲೇಶ್‌ ಪಾರ್ತೇತಿ(40) ಮತ್ತು ಕಾನ್‌ಸ್ಟೇಬಲ್‌ ಚಂದ್ರಕುಮಾರ್‌ ಚೌಧರಿ(30) ಅವರು ಛಪಾರ ಪೊಲೀಸ್‌ ಠಾಣೆಯತ್ತ ಎಸ್‌ಯುವಿಯಲ್ಲಿ ಪಯಣಿಸುತ್ತಿದ್ದರು. ಈ ವೇಳೆ ವಾಹನ ವಿದ್ಯುತ್‌ ಪರಿವರ್ತಕಕ್ಕೆ ಡಿಕ್ಕಿ ಹೊಡೆದು, ಬಾವಿಗೆ ಬಿದ್ದಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಶನಿವಾರ, ಬಾವಿಯಲ್ಲಿ ವಾಹನವನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದರು. ಬಳಿಕ ಬಾವಿಯಿಂದ ಮೃತದೇಹಗಳನ್ನು ಹೊರತೆಗೆಯಲಾಯಿತು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.