ADVERTISEMENT

ಪ್ರತ್ಯೇಕ ಗ್ರೆನೆಡ್‌ ದಾಳಿ: ಇಬ್ಬರು ಸಿಆರ್‌ಪಿಎಫ್‌ ಯೋಧರು ಗಾಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 21:44 IST
Last Updated 19 ಮಾರ್ಚ್ 2022, 21:44 IST

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಹಾಗೂ ತ್ರಾಲ್‌ನಲ್ಲಿ ಶನಿವಾರ ಉಗ್ರರು ನಡೆಸಿದ ಎರಡು ಪ್ರತ್ಯೇಕ ಗ್ರೆನೆಡ್‌ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಇಬ್ಬರು ಯೋಧರು ಗಾಯಗೊಂಡಿದ್ದಾರೆ.

‘ಶೋಪಿಯಾನ್‌ನ ಝೈನ್‌ಪೋರಾದ ಸಿಆರ್‌ಪಿಎಫ್‌ ಶಿಬಿರದ ಮೇಲೆ ಅಪರಿಚಿತ ಉಗ್ರರು ಎಸೆದ ಗ್ರೆನೆಡ್‌ ಸ್ಫೋಟಗೊಂಡು 178ನೇ ಬ್ಯಾಟಲಿಯನ್‌ನ ಸಿಆರ್‌ಪಿಎಫ್‌ ಯೋಧರೊಬ್ಬರು ಗಾಯಗೊಂಡರು. ಪುಲ್ವಾಮ ಜಿಲ್ಲೆಯ ನೌದಲ್‌ ಸಿಆರ್‌ಪಿಎಫ್‌ ಶಿಬಿರದ ಮೇಲೆ ಉಗ್ರರು ಎಸೆದ ಗ್ರೆನೆಡ್‌ ಸ್ಪೋಟಗೊಂಡು ಮತ್ತೊಬ್ಬ ಸಿಆರ್‌ಪಿಎಫ್‌ ಯೋಧ ಗಾಯಗೊಂಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಕಾಶ್ಮೀರ ಕಣಿವೆಯಲ್ಲಿ ಉಗ್ರ ಚಟುವಟಿಕೆಗಳು ಜೀವಂತವಾಗಿದೆ ಎಂಬ ಭಾವನೆ ಮೂಡಿಸಲು ಇಂತಹ ಕೃತ್ಯಗಳನ್ನು ಎಸಗಲಾಗುತ್ತಿದೆ’ ಎಂದು ಉಗ್ರ ನಿಗ್ರಹ ಪಡೆಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.