ಚಾಯಿಬಾಸಾ/ಜಾರ್ಖಂಡ್: ಇಲ್ಲಿನ ಜರೈಕೆಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್ ಟವರ್‌ಗಳಿಗೆ ಬೆಂಕಿ ಹಚ್ಚಿದ್ದ, ಛೋಟಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಖಾಮತಿಯಲ್ಲಿ ಕಾಲುವೆಗಳನ್ನು ಸ್ಫೋಟಿಸಿದ್ದ ಇಬ್ಬರು ನಕ್ಸಲರನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.
ಆಲ್ಬರ್ಟ್ ಲೊಮ್ಗಾ ಅಲಿಯಾಸ್ ರೆಂಗಾ ಲೊಮ್ಗಾ (19) ಹಾಗೂ ವಿಕಾಸ್ ಲೊಮ್ಗಾ ಅಲಿಯಾಸ್ ರಾಪಾ ಲೊಮ್ಗಾ (20) ಅವರನ್ನು ಶುಕ್ರವಾರ ಇಲ್ಲಿನ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಬಂಧಿತರಿಂದ 9 ವಾಲ್ಟ್ ಸಾಮರ್ಥ್ಯದ 22 ಬ್ಯಾಟರಿ ಹಾಗೂ 200 ಮೀಟರ್ ವೈರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದೇ ಜಿಲ್ಲೆಯ ಜೆತಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಮತ್ತೊಂದು ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಮಾವೋವಾದಿಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಅಡಗಿಸಿರಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಬಂಧಿತರಿಂದ 10 ಇನ್ಸಾಸ್ ರೈಫಲ್, 198 ಜೀವಂತ ಗುಂಡುಗಳು, 112 ಕ್ಯಾಟ್ರಿಡ್ಜ್‌ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರೇಣು ತಿಳಿಸಿದ್ದಾರೆ.
ಸಿಆರ್‌ಪಿಎಫ್, ಕೋಬ್ರಾ, ಜಾರ್ಖಂಡ್ ಜಾಗ್ವಾರ್ ಹಾಗೂ ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ ನಕ್ಸಲರನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.